ಗಾಂಧಿಪ್ರಸಂಗ -ಈ ಕಥಾ ಸಂಕಲನವನ್ನು ಬಸವಣ್ಣೆಪ್ಪಾ ಕಂಬಾರ ರಚಿಸಿದ್ಅದು, ಈ ಕೃತಿಯು ಅವರ 3ನೇ ಕಥಾ ಸಂಕಲನ. ಒಟ್ಟು 11 ಕತೆಗಳಿವೆ. ಪುಸ್ತಕದ ಹೆಸರಿನ ಕತೆ ಲೇಖಕರ ಊರಿನಲ್ಲಿ ನಡೆಯುವ ಪ್ರಸಂಗಗಳಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಜನ ಜನೀತವಾಗಿರುವ ಚಿತ್ರಣವಾಗಿದೆ. ಈ ಹೊತ್ತಿಗೆ ನಡೆಸುವ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಈ ಕತೆಗೆ ಮೊದಲು ಬಹುಮಾನ ಸಂದಿದೆ. ಪ್ರಮುಖ ಕತೆಗಾರರಾದ ಅಮರೇಶ ನುಗಡೋಣಿ ಅವರು ಮುನ್ನುಡಿ ಬರೆದಿದ್ದು ಕಂನಾಡಿಗ ನಾರಾಯಣ ಅವರು ಬೆನ್ನುಡಿ ಬರೆ ಕಥೆಗಳ ವಿಷಯ ವಸ್ತು, ತಂತ್ರ, ಶೈಲಿ ಎಲ್ಲವನ್ನು ಪ್ರಶಂಸಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಬಸವಣ್ಣೆಪ್ಪ ಕಂಬಾರ ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಸವಣ್ಣೆಪ್ಪಾ ಅವರು ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದಾರೆ. ಅವರ ಆಟಿಕೆ’ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕತಾ ಪ್ರಶಸ್ತಿ, ಧಾರವಾಡದ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ನ ಬೇಂದ್ರೆ ಪುಸ್ತಕ ಬಹುಮಾನ ಸಂದಿವೆ. ...
READ MORE