ಗಲ್ಲುಗಂಬದ ಆತಂಕದಲ್ಲಿ

Author : ಡಿ.ವಿ. ಗುರುಪ್ರಸಾದ್

₹ 140.00




Year of Publication: 2020
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

‘ಗಲ್ಲುಗಂಬದ ಆತಂಕದಲ್ಲಿ’ ಲೇಖಕ ಡಿ.ವಿ. ಗುರುಪ್ರಸಾದ್ ಅವರ ಕತಾಸಂಕಲನ. ಮರಣದಂಡನೆಗೀಡಾದ ಕೈದಿಗಳ ಕಥೆಗಳಿವೆ. ವಿರಳದಲ್ಲಿ ವಿರಳವಾದ ಮರಣದಂಡನೆಯ ಶಿಕ್ಷೆಯು ಸಿಗಬೇಕಾದಲ್ಲಿ ಅಪರಾಧಿಯು ನಡೆಸಿದ ಕೃತ್ಯ ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿ, ಅಪರಾಧಿಯ ವಿಕೃತಿಯನ್ನು ಸಾರಬೇಕು. ಇಂತಹ ಹಲವು ಘೋರ ಅಪರಾಧಗಳ ಗುಚ್ಛವೇ ನಿವೃತ್ತ ಪೊಲೀಸ್ ಅಧಿಕಾರಿ ಗುರುಪ್ರಸಾದ್ ಅವರ ಈ ಕುತೂಹಲಕಾರಿ ಪುಸ್ತಕ. ಸರಣಿ ಕೊಲೆ, ಸಾಮೂಹಿಕ ಅತ್ಯಾಚಾರ, ಡಾನ್ ಗಳ ಅಟ್ಟಹಾಸ ಮುಂತಾದ ಹಲವು ಕುತೂಹಲಕರ ಘಟನೆಗಳನ್ನು ಲೇಖಕರು ಹೆಕ್ಕಿ ತೆಗೆದು ತಮ್ಮ ಟ್ರೀಡ್ ಮಾರ್ಕ್ ಸರಳ ಶೈಲಿಯಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Conversation

Related Books