ಎತಪ್ಪ (ಸಾಂಸ್ಕೃತಿಕ ವೀರನ ಕಥೆ) ಮೀರಾಸಾಬಿಹಳ್ಳಿ ಶಿವಣ್ಣ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿ ಕಾಡುಗೊಲ್ಲರ ಸಾಂಸ್ಕೃತಿಕ ವೀರಪುರುಷ ಎತ್ತಪ್ಪನ ಕಥಾನಕವಿದೆ. ಇದನ್ನು ಹಳೆಯ ಕಾಲದ ಗೊಲ್ಲತಿಯರ ಹಾಡು, ಕೋಲಾಟದ ಪದ, ಗಣೆಯ ಪದ ಇವುಗಳ ಆಧಾರದಿಂದ ತುಂಬ ಶ್ರಮವಹಿಸಿ ಸಂಪಾದಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಆಂಧ್ರಗಡಿಯಂಚಿನ ಚಳ್ಳಕೆರೆ ತಾಲ್ಲೂಕಿನ ಮೀರಾಸಾಬಿಹಳ್ಳಿಯವರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ (1952) ಜಾನಪದ ವಿದ್ವಾಂಸರು. ಮೀರಾಸಾಬಿಯಳ್ಳಿಯ ಪಟೇಲರಾದ ಪಟೇಲ್ ಬೊಮ್ಮೇಗೌಡ ಅವರ ತಂದೆ. ಕರಿಯಮ್ಮ ತಾಯಿ. ಕೃಷಿಕ ಕುಟುಂಬದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಬಿ.ಎ. (ಆನರ್) (1972). ಎಂ.ಎ. (1974) ಪದವಿ ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ “ಕಾಡುಗೊಲ್ಲರ ಇಬ್ಬರು ಸಾಂಸ್ಕತಿಕ ವೀರರು (ಎತ್ತಪ್ಪ-ಮುಂಜಪ)- ಒಂದು ಅಧ್ಯಯನಕ್ಕಾಗಿ ಪಿಎಚ್.ಡಿ (1996) ಪದವಿ ದೊರೆಯಿತು. ಎರಡು ಬಾರಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ (1984-1987 ಮತ್ತು 1998-2001) ಸೇವೆ ಸಲ್ಲಿಸಿರುವ ಅವರಿಗೆ ಜಾನಪದ ಕ್ಷೇತ್ರಕಾರ್ಯಕ್ಕಾಗಿ ಜಿ.ಶಂ.ಪ ಜಾನಪದ ತಜ್ಞ ಪ್ರಶಸ್ತಿ' (2011) ನೀಡಿ ...
READ MOREಹೊಸತು- ಜೂನ್ -2003
ಜಾನಪದ ಕ್ಷೇತ್ರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೀರಾಸಾಬಿಹಳ್ಳಿ ಶಿವಣ್ಣ ಬಹಳ ಆಳವಾಗಿ ಬುಡಕಟ್ಟು ಜನಾಂಗವನ್ನು ಅಭ್ಯಾಸ ಮಾಡಿದ್ದಾರೆ. ಈ ಕೃತಿಯಲ್ಲಿ ಕಾಡುಗೊಲ್ಲರ ಸಾಂಸ್ಕೃತಿಕ ವೀರಪುರುಷ ಎತ್ತಪ್ಪನ ಕಥಾನಕವಿದೆ. ಇದನ್ನು ಹಳೆಯ ಕಾಲದ ಗೊಲ್ಲತಿಯರ ಹಾಡು, ಕೋಲಾಟದ ಪದ, ಗಣೆಯ ಪದ ಇವುಗಳ ಆಧಾರದಿಂದ ತುಂಬ ಶ್ರಮವಹಿಸಿ ಸಂಪಾದಿಸಲಾಗಿದೆ. ಪಶುಸಂಗೋಪನೆಯ ಕಾಲದಲ್ಲಿ ಕಾಡುಮೇಡು ಅಲೆಯುತ್ತ ತಮಗೊದಗಿದ ಅಪಾಯವನ್ನೆದುರಿಸುತ್ತ ಮುನ್ನಡೆದ ವೀರನೊಬ್ಬನ ಗಾಥೆ.