‘ಈ ಮನದ ಆಕಾಶಗಂಗೆ’ ಕೃತಿಯು ಸವಿತಾ ಶ್ರೀನಿವಾಸ್ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಸಾಮಾಜಿಕ, ಫ್ಯಾಂಟಸಿ ಹಾಗೂ ವೈಜ್ಞಾನಿಕ ಕಥೆಗಳನ್ನೊಳಗೊಂಡ 13 ಕಥೆಗಳಿದ್ದು ಇಲ್ಲಿದ್ದು, ಲೇಖಕಿಯ ಹರೆಯದ ದಿನಗಳಲ್ಲಿ ಈ ಕತಾಸಂಕಲನವನ್ನು ರಚಿಸಲಾಗಿವೆ. ಇದರಲ್ಲಿನ ಹಲವಾರು ಕಥೆಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ತರಂಗ, ಮಂಗಳ, ಮಯೂರ ಮುಂತಾದೆಡೆ ಪ್ರಕಟವಾಗಿದ್ದು ಹೆಚ್ಚಿಗೆ ಮಹಿಳಾ ಕೇಂದ್ರಿತವಾಗಿವೆ. ಇದರಲ್ಲಿನ ಪ್ರಥಮ ಕಥೆ ‘ಬಾಳಸಂಜೆ’ (1986) ಓರ್ವ ವೃದ್ಧನ ಸುತ್ತ ಹೆಣೆಯಲಾಗಿದ್ದರಿಂದ ಹಿಡಿದು ಆಧುನಿಕ ಯುವತಿಯ ಕಥಾ ವಸ್ತುವಿರುವ ಆತ..ಈಕೆ..ಮತ್ತದು' (1992)ಕಥೆಯವರೆಗೆ ಚಾಚಿವೆ.
ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು. ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...
READ MORE