ಲೇಖಕ ಹೆಚ್. ಆರ್. ವಿಶ್ವಾಸ ಅವರ ಕನ್ನಡಭಾಷೆಯ ಮೊದಲ ಕೃತಿ ಇದು. ಶೀರ್ಷಿಕೆಯ ಹೆಸರಿನ ಕತೆಯೂ ಸೇರಿದಂತೆ ಒಟ್ಟು ಎಂಟು ಸಣ್ಣಕತೆಗಳ ಸಂಕಲನ ಇದಾಗಿದೆ. ನಾಲ್ಕು ಕತೆಗಳು ಗ್ರಾಮಜೀವನಕ್ಕೆ ಸಂಬಂಧ ಪಟ್ಟವಾದರೆ ಉಳಿದ ನಾಲ್ಕು ನಗರ ಜೀವನಕ್ಕೆ ಸಂಬಂಧ ಪಟ್ಟವಾಗಿವೆ. ಇಪ್ಪತ್ತೈದು ಪುಟಗಳನ್ನು ವ್ಯಾಪಿಸಿರುವ ಮೊದಲ ಕತೆಯನ್ನು ನೀಳ್ಗತೆ ಎಂದುಕೊಳ್ಳಬಹುದಾದರೆ ಉಳಿದವು ಸಣ್ಣ ಕತೆಗಳಾಗಿವೆ. ಇಲ್ಲಿನ ಕೆಲವು ಕತೆಗಳು ಹಾ. ಮಾ. ನಾಯಕರ ಮತ್ತು ಬನ್ನಂಜೆ ಗೋವಿಂದಾಚರ‍್ಯರ ಮೆಚ್ಚುಗೆಗೂ ಪಾತ್ರವಾಗಿವೆ. ಎಲ್. ಎಸ್. ಶೇಷಗಿರಿರಾಯರ ಮುನ್ನುಡಿ ಸಂಕಲನದ ತೂಕವನ್ನು ಹೆಚ್ಚಿಸಿರುತ್ತದೆ.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE