ಲೇಖಕ, ಕತೆಗಾರ ಚಿದಾನಂದ ಸಾಲಿಯವರ ’ಧರೆಗೆ ನಿದ್ರೆಯು ಇಲ್ಲ’ ಕಥಾ ಸಂಕಲನವು ಒಟ್ಟಾರೆ ಬದುಕಿನ ಅರ್ಥವನ್ನು ಶೋಧಿಸಿಕೊಳ್ಳುವ ಮಾರ್ಗದಲ್ಲಿ ಸಾಗುವಂಥದ್ದು. ಇದು ಒಂಬತ್ತು ಕತೆಗಳ ಸಂಕಲನ. ವರ್ತಮಾನವನ್ನು ಸ್ಪಷ್ಟವಾಗಿ ಗ್ರಹಿಸುವ, ಜಾಗತೀಕರಣದಂತಹ ಪರಿಕರಗಳನ್ನು ವಸ್ತುವಾಗಿ ಪರಿಕಲ್ಪಿಸುವ ಮತ್ತು ಮಾನವ ನಡವಳಿಕೆಗಳಲ್ಲಿ ಸಾಮಾಜಿಕತೆಯನ್ನು ಕಂಡುಕೊಳ್ಳುವಂತಹ ಸಾಧ್ಯತೆಗಳನ್ನು ಸಾಲಿಯವರ ಕಥೆಗಳು ನಿರೂಪಿಸುತ್ತವೆ. ಸಾಲಿಯವರ ’ಕೊಟ್ಟ ಕುದುರೆಯನೇರಲರಿಯದೆ’, 'ಒಳಗಿನೊಗಳಿನ ಒಳಗೆ', ’ಆಸೆಯೆಂಬ ತಥಾಗತನ ವೈರಿ’,’ತಾಯ ಮೊಲೆವಾಲು ನಂಜಾಗಿ’,’ಕಂಡುದ ಹಿಡಿಯದೆ’,’ಅಂಬರದೊಳಗಾಡುವ ಗಿಳಿ’,’ಕಳ್ಳಗಂಜಿ ಕಾಡ ಹೊಕ್ಕಡೆ’,’ಕಾಗೆಯೊಂದಗಳ ಕಂಡರೆ’, ’ಮನಸೂಂದ್ರ ನಾಕೊಂದ್ಲ ನಾಕಲ್ಲ’ ಇವು ಸಹೃದಯನಿಗೆ ಇಷ್ಟವಾಗಬಲ್ಲ ಕತೆಗಳು.
ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...
READ MORE