ಧಣೇರ ಭಾವಿ

Author : ಶರಣಬಸವ ಕೆ. ಗುಡದಿನ್ನಿ

Pages 84

₹ 90.00




Year of Publication: 2021
Published by: ಸುಗಮ ಪುಸ್ತಕ
Address: ಹಲಸಂಗಿ ತಾ.ಚಡಚಣ ಜಿ.ವಿಜಯಪುರ
Phone: 9980845630

Synopsys

“ಧಣೇರ ಭಾವಿ” ಲೇಖಕ ಶರಣಬಸವ ಕೆ. ಗುಡದಿನ್ನಿ ಮೊದಲ ಕಥಾ ಸಂಕಲನ. ಕಥೆಗಳ  ನಿರೂಪಣಾ ಶೈಲಿಯಲ್ಲಿ ಹೊಸತನವಿದೆ. ಕೃತಿಗೆ ಬೆನ್ನುಡಿ ಬರೆದ ಬಾಳಾಸಾಹೇಬ ಲೋಕಾಪುರ ‘ಕಥೆಗಳು ಇಲ್ಲಿ ರಚನೆಗಳಾಗದೇ ಕಾವ್ಯ ಲಯ ವಿನ್ಯಾಸವನ್ನು ಹೊತ್ತು ತಂದಿವೆ’ ಎಂದು ಪ್ರಶಂಸಿಸಿದ್ದರೆ ಸಾಹಿತಿ ಭಾರತಿದೇವಿ ಪಿ. ಹಾಸನ ‘ಕಥೆಯ ಪಾತ್ರಗಳು ಸಹಜ ಜೀವನದ ಪ್ರೀತಿಯಿಂದ ಎಲ್ಲ ಗೋಡೆಗಳನ್ನು ಮೀರುತ್ತವೆ ಎಂದು ಅಭಿಪ್ರಾಯಪಟ್ಟರೆ ಸಾಹಿತಿ ಮೇಟಿ ಮಲ್ಲಿಕಾರ್ಜುನ ಅವರು ‘ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ರೂಪಕ -ಪ್ರತಿಮೆಗಳು ಈ ಎಲ್ಲ ಕಥೆಗಳಿಗೆ ವಿಶೇಷ ಮೆರಗು ಕೊಟ್ಟಿವೆ’ ಎಂದು ಶ್ಲಾಘಿಸಿದ್ದಾರೆ. 

About the Author

ಶರಣಬಸವ ಕೆ. ಗುಡದಿನ್ನಿ
(01 June 1982)

ಲೇಖಕ ಶರಣಬಸವ ಕೆ.ಗುಡದಿನ್ನಿ ಮೂಲತಃ ರಾಯಚೂರು ಜಿಲ್ಲೆಯ ಕೆ. ಗುಡದಿನ್ನಿಯವರು. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಇವರ ಆಸಕ್ತಿಯ ಕ್ಷೇತ್ರ ಕತೆ. ಧಣೇರ ಬಾವಿ ಇವರ ಮೊದಲ ಕಥಾ ಸಂಕಲನ. ಸತತ ಎರಡು ವರ್ಷ ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ದೆಯ ಟಾಪ್- 25 ಕತೆಗಳಲ್ಲಿ ಇವರ ಕತೆಗಳು ಸ್ಥಾನ ಪಡೆದಿವೆ. ತಬ್ಬಲಿ ಮರ ಕತೆಗೆ ಸಮತಾ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ದೊರಕಿದೆ. ಉಡದಾರ ಇವರ ಎರಡನೆಯ ಕೃತಿ. ...

READ MORE

Related Books