ಗ್ರಾಮ-ನಗರಗಳಲ್ಲಿನ ಬದುಕಿನ ಸಂಕೀರ್ಣತೆಯನ್ನು ಕೊಂಚ ನಾಟಕೀಯತೆ, ಕೊಂಚ ಜನಪ್ರಿಯ ಧಾಟಿಯನ್ನು ಬಳಸಿ ಕಥೆ ಕಟ್ಟುವುದು ಫಕೀರ ಅವರ ವಿಧಾನವಾಗಿದೆ. ಗ್ರಾಮೀನ ಬದುಕಿನ ಸಂವೇದನೆಗಳನ್ನು ಹಿಡಿದಿಡುವಾಗ ಮಧ್ಯ ಕರ್ನಾಟಕದ ಜನನುಡಿಯನ್ನು ಪಳಗಿಸಿ ಬಳಸುವುದು ಕೂಡ ಅವರ ಕಥನ ಕ್ರಮವಾಗಿದೆ. ಸತ್ತವನ ಆತ್ಮ, ಅಪ್ಪ ಎಂಬ ಪ್ರಾರಬ್ಧ, ಚಿನ್ನದ ಬೀಜ, ಮೀಸೆ ಫಕೀರಪ್ಪನ ಅದಾಲತ್ತು, ಮರಯೋಗಿ ತಿಮ್ಮಕ್ಕಗಳಂತ ಕಥೆಗಳು ಇಂಥ ಜನಭಾಷೆಯಿಂದ ಗಮನ ಸೆಳೆಯುತ್ತವೆ. ಅನಸೂಯಮ್ಮನ ಗರಡಿಮನೆ, ಆಲ್ಬರ್ಟ್ ಪಿಂಟೊ, ಅಪ್ಪನ ಟೆಲಿಗ್ರಾಮ್, ದೇವರ ಜೋಳಿಗೆ, ಅನಾಥ ಮನಸ್ಸುಗಳಂಥ ಕತೆಗಳ ಜಾಡು ಬೇರೆ ಬಗೆಯದು. ನಗರದ ಬದುಕಿನ ಅನುಭವಗಳನ್ನು ಈ ಕತೆಗಳು ಇನ್ನೊಂದು ರೀತಿಯಲ್ಲಿ ನೋಡಲು ಪ್ರಯತ್ನಿಸುತ್ತವೆ. ಆದರೆ, ಎರಡೂ ಬಗೆಯ ಕಥೆಗಳ ಆಶಯ ಮನುಷ್ಯ ಸಂಬಂಧಗಳ ಟೊಳ್ಳು-ಗಟ್ಟಿತನ, ಸ್ವಾರ್ಥ, ಅಸಹಾಯತೆ, ಕ್ರೌರ್ಯ, ಅವಮಾನಗಳಂತಹ ಆದಿಮ ಭಾವನೆಗಳನ್ನು ಶೋಧಿಸುವುದೇ ಆಗಿದೆ. ಮನುಷ್ಯ ತಲುಪಬಹುದಾ ಸ್ವಾರ್ಥದ ಅಲಗನ್ನು ಸತ್ತವನ ಆತ್ಮ, ಆಲ್ಬರ್ಟ್ಪಿಂಟೋ ಕಥೆಗಳು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ ಎಂದು ಕತೆಗಾರ ಕೇಶವ ಮಳಗಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.
'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...
READ MORE