‘ದಾಸವಾಳ’ ಎ.ಎನ್. ಪ್ರಸನ್ನ ಅವರ ಕಥಾ ಸಂಕಲನ. ಈ ಕೃತಿಗೆ ಎಂ.ಜಿ. ಹೆಗಡೆ ಮುನ್ನುಡಿ ಬರೆದಿದ್ದಾರೆ. ಕೃತಿಯ ಬಗ್ಗೆ ವಿವರಿಸುತ್ತಾ ವ್ಯಕ್ತಿಗಳು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೇಗೆ ವರ್ತಿಸುತ್ತಾರೆ ಮತ್ತು ಅವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲವೇ ಪ್ರಸ್ತುತ ಸಂಗ್ರಹದ ಕುಣಿಕೆ, ಹೊರದಾರಿ, ನಿರ್ಧಾರ, ಮತ್ತು ದಾಸವಾಳ ಕತೆಗಳ ಕಥನ ಕಾರಣವಾಗಿದೆ ಎನ್ನುತ್ತಾರೆ. ಈ ನಾಲ್ಕು ಕತೆಗಳಲ್ಲಿ ದಾಸವಾಳ ಕೊಂಚ ಬಿನ್ನವಾಗಿದೆ ಎನ್ನುವ ಎಂ.ಜಿ. ಹೆಗಡೆ ಅವರು ನಿರೂಪಕ-ನಾಯಕಿ ತನ್ನ ಬದುಕನ್ನು ತಾನೇ ನಿರ್ಮಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದವಳು. ಇಂತಹುದೇ ಹಂಬಲ ಮತ್ತು ಒತ್ತಡದಿಂದ ಪಾರಾದ ಅವಳ ತಾಯಿ ಅವಳಿಗೆ ಪ್ರೇರಣೆ ಮತ್ತು ಆದರ್ಶವೆನ್ನುವುದನ್ನು ಕತೆಯ ವಿವರಗಳು ಸೂಚಿಸುತ್ತವೆ. ಉದ್ದಕ್ಕೂ ಹಾಜರಿರುವ ದಾಸವಾಳದ ಪ್ರತಿಮೆ ದುಡಿಯುವುದು ಇದಕ್ಕಾಗಿ ಎಂದು ವಿವರಿಸಿದ್ದಾರೆ.
ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...
READ MORE