ದಕ್ಷಿಣ ಕನ್ನಡದ ಶತಮಾನದ ಕತೆಗಳು

Author : ಬಿ. ಜನಾರ್ದನ ಭಟ್

Pages 620

₹ 300.00




Year of Publication: 2003
Published by: ಕರ್ನಾಟಕ ಸಂಘ, ಪುತ್ತೂರು

Synopsys

ಬಿ. ಜನಾರ್ದನ ಭಟ್ ಅವರ ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’ ಕೃತಿಯು ಕಳೆದ ಶತಮಾನದಲ್ಲಿ (1900-2000) ಪ್ರಕಟವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕತೆಗಳ ಸಂಗ್ರಹ. ಈ ಸಂಕಲನದಲ್ಲಿ ಪಂಜೆ ಮಂಗೇಶರಾಯರ “ನನ್ನ ಚಿಕ್ಕ ತಾಯಿ” ಕತೆಯಿಂದ ಆರಂಭಿಸಿ ಜೋಗಿ ಅವರ ‘ಸೀಳು ನಾಲಿಗೆ’ ಕತೆಯವರೆಗೆ ಒಟ್ಟು 59 ಶ್ರೇಷ್ಠ ಸಣ್ಣಕತೆಗಳು 620 ಪುಟಗಳಲ್ಲಿ ಹರಡಿಕೊಂಡಿವೆ. ಇಂದು ಬಹಳ ಪ್ರಮುಖ ಸಾಂಸ್ಕೃತಿಕ ಮಹತ್ವದ ಪ್ರಕಟಣೆಗಳಲ್ಲಿ ತೊಡಗಿರುವ ಪುತ್ತೂರಿನ ಕರ್ನಾಟಕ ಸಂಘ ಈ ಕೃತಿಯನ್ನು ಪ್ರಕಟಿಸಿದೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books