ದಾರಿ ತಪ್ಪಿಸುವ ಗಿಡ

Author : ಮಹದೇವಸ್ವಾಮಿ ಕೆ.ಎಸ್ (ಸ್ವಾಮಿ ಪೊನ್ನಾಚಿ)

Pages 104

₹ 120.00




Year of Publication: 2023
Published by: ವೈಷ್ಣವಿ ಪ್ರಕಾಶನ
Address: ಕೆ ಗುಡದಿನ್ನಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ
Phone: 9620170027

Synopsys

'ದಾರಿ ತಪ್ಪಿಸುವ ಗಿಡ' ಕಥಾಸಂಕಲನವೂ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಮೈಲುಗಲ್ಲನ್ನ ಸೃಷ್ಟಿಸುವ ವಿನೂತನ ಕಥಾಹಂದರ ಎನ್ನಬಹುದು. ಕಥೆಯ ನಿರೂಪಣಾ ಶೈಲಿ ಓದುಗರ ಮನಸ್ಸನ್ನು ಅತ್ತಿತ್ತ ಕದಡಲು ಬಿಡುವುದೇ ಇಲ್ಲ ಮುಂದೇನು? ಎಂಬ ಕುತೂಹಲದ ಕಂದೀಲನ್ನು ಹೊತ್ತುಕೊಂಡೇ ಸಾಗುತ್ತದೆ. ಇನ್ನು ಒಂದು ಕಾಡಿನಲ್ಲಿರುವ ಯಾವುದೋ ಗಿಡ ಒಬ್ಬ ವ್ಯಕ್ತಿಯನ್ನು ಆದು ಹೇಗೆ ದಾರಿ ತಪ್ಪಿಸಬಹುದು.. ನಡು ರಾತ್ರಿಯಲ್ಲಿ ಕಾಡಿನ ದಾರಿಯಲ್ಲಿ ನಡೆದು ಊರು ತಲುಪಬೇಕಾದವನ ಜೊತೆ ನಡೆದು ಬಂದವರು ಯಾರು.. ಇಂತಹದ್ದೇ ಅನೇಕ ಕಾಡಿನ ಕುತೂಹಲಕಾರಿ ಕಥೆಗಳನ್ನೊಳಗೊಂಡ ಕಥಾಸಂಕಲನ ಸ್ವಾಮಿ ಪೊನ್ನಾಚಿಯವರದ್ದು. ಈ ಕಥೆಯಂತು ಕಗ್ಗತ್ತಲೆಯ ಕಾನನದ ಜೀವನ ಪಶುಪಾಲನೆಯ ಜೀವನ ಶೈಲಿ ಮಾರನನ್ನು ರೇಷನ್ ತರಲು ಪಟ್ಟಣಕ್ಕೆ ಕಳಿಸಿ ಒಬ್ಬನೇ ಭಯದಲ್ಲಿ ಮೊಸರುದೆವ್ವ, ಕೊಳ್ಳಿದೆವ್ವ ಸದ್ದಿಗೆ ಓಯ್ ಎಂದರೆ ಸಾಕು ರಕ್ತಕಾರಿ ಸಾಯುತ್ತಾರೆಂಬ ಮಾತಿಗೆ ಕಥಾನಾಕನಿಗಾಗುವ ತಳಮಳ ತನ್ನ ಪುಕ್ಕುಲುತನವನ್ನು ಸಮಾಧಾನಪಡಿಸಿಕೊಂಡು ಮಾರನನ್ನು ಬೈಯ್ದುಕೊಳ್ಳುವ ಬಗೆ, ಅವನು ಬಾರದಿರಲು ಆ ಗಿಡವೇ ದಾರಿ ತಪ್ಪಿಸಿರಬಹುದೆಂಬ ಕಳವಳ, ಬೆಂಕಿಯ ಸೂಟೆಯಿಂದ ಆನೆಯನ್ನು ಓಡಿಸುವ ಚಿತ್ರಣ, ಕಿರುಬಗಳು ಹಸುವನ್ನ ಕ್ಷಣ ಮಾತ್ರದಲ್ಲಿಯೇ ಕದ್ದೊಯ್ಯುತ್ತವೆ ಎಂದು ಹಲುಬುವುದು ಮುಂಜಾವಿನಲ್ಲಿ ಮಾರ ಬಂದು ಕೂಗಿದಾಗ ದೆವ್ವವಿರಬಹುದೆಂದು ಏನೇನೋ ಬೈಯುತ್ತಾ ಕಲ್ಲು ಬೀಸಿ ಕೊನೆಗೆ ವಾಸ್ತವ ಅರ್ಥೈಸಿಕೊಂಡು ಮಾರನ ಜೊತೆ ಮಾತನಾಡಿ ಇಡೀ ಕಥೆ ರಾತ್ರಿ ಕಾನನದಲ್ಲಿ ಕಳೆಯುವ ಕಳವಳದ ಕ್ಷಣವಾಗಿದೆ.

About the Author

ಮಹದೇವಸ್ವಾಮಿ ಕೆ.ಎಸ್ (ಸ್ವಾಮಿ ಪೊನ್ನಾಚಿ)

ಕವಿ, ಕಥೆಗಾರ ಮಹದೇವಸ್ವಾಮಿ ಕೆ.ಎಸ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯಲ್ಲಿ 1986ರಲ್ಲಿ ಜನಿಸಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಪೊನ್ನಾಚಿ ಯಲ್ಲಿ. ಕೊಳ್ಳೇಗಾಲ ಮತ್ತು  ಮೈಸೂರಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ಪುಸ್ತಕ ಪ್ರಾಧಿಕಾರ ದಿಂದ ಧನ ಸಹಾಯ ಪಡೆದು 2015ರಲ್ಲಿ "ಸಾವೊಂದನ್ನು ಬಿಟ್ಟು " ಮೊದಲ ಕವನ ಸಂಕಲನ ಪ್ರಕಟಣೆಯಾಗಿದೆ. ಈ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ ದೊರೆತಿದೆ ಹಾಗೂ ಮಂಡ್ಯದ adviser ಪತ್ರಿಕೆಯವರು adviser ...

READ MORE

Related Books