‘ಕೋವಿಡ್ ಡಾಕ್ಟರ್ ಡೈರಿ’ ಗ್ರಾಮಭಾರತದ ಕಥೆಗಳು ಲೇಖಕಿ ಡಾ. ಎಚ್.ಎಸ್. ಅನುಪಮಾ ಅವರ ಕಥಾಸಂಕಲನ. ಈ ಕೃತಿಗೆ ರಜನಿ ಗರುಡ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟ್ಟದ ಮೇಲೆ ಮಲೆನಾಡು ಮತ್ತು ಘಟ್ಟದ ಕೆಳಗೆ ಕರಾವಳಿ ಎಂದು ಇಬ್ಬಾಗ ಮಾಡಲಾಗಿದೆ, ನಾನು ಘಟ್ಟದ ಮೇಲಿನವಳು ದಟ್ಟ ಕಾಡು, ಕಣಿವೆ, ಬೆಟ್ಟಗುಡ್ಡಗಳ ಸಾಲು, ನದಿಗಳು, ಕರಾವಳಿ ಇವುಗಳೆಲ್ಲದರ ಫಲವತ್ತತೆ ಇದ್ದರೂ ಈ ಜಿಲ್ಲೆ ಕಾಲಕ್ಕೆ ತಕ್ಕ ಅಭಿವೃದ್ಧಿಯನ್ನು ಕಾಣದೆ, ಕನಿಷ್ಟ ನಾಗರಿಕ ಸೌಕರ್ಯವನ್ನು ಇಂದಿಗೂ ಕಂಡಿಲ್ಲವೆಂಬುದನ್ನು ಕೋಪ ಮತ್ತು ದುಖಃದಿಂದಲೇ ಜಿಲ್ಲೆಯಾಚೆ ಇರುವ ನಾವು ಹೇಳಿಕೊಳ್ಳುತ್ತೇವೆ. ಇದಕ್ಕೆ ಸರಿಯಾಗಿ ರಾಜಕೀಯ ಪ್ರಾಬಲ್ಯ ಕೂಡ ಈ ಜಿಲ್ಲೆಗೆ ಇಲ್ಲ’ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯೆಯಾಗಿರುವ ಡಾ.ಎಚ್.ಎಸ್. ಅನುಪಮಾ ತಮ್ಮ ಕೋವಿಡ್ ಡಾಕ್ಟರ್ ಡೈರಿ ಸರಣಿಯಲ್ಲಿ ವೈದ್ಯೆಯ ಕಣ್ಣಲ್ಲಿ ಕೊರೋನಾ ಚಿತ್ರಗಳನ್ನು ಕಟ್ಟಿಕೊಡುವುದರ ಜೊತೆಗೆ ಅಲ್ಲಿಯ ಹಲವಾರು ಸಂಗತಿಗಳನ್ನು ಸೂಕ್ಷ್ಮವಾಗಿ ಬಿಡಿಸಿಡುತ್ತಾರೆ. ರೋಗಿಗಳನ್ನು ಪರೀಕ್ಷಿಸಿ, ಔಷಧ ಕೊಡುವ ಬರಿಯ ಡಾಕ್ಟರ್ ಆಗದೆ. ರೋಗಿಯ ರೋಗದ ಆಚೆಗೆ ತಮ್ಮ ಕಿವಿ, ಕಣ್ಣು, ಹೃದಯವನ್ನು ತೆರೆದಿಟ್ಟು ಮಮತೆಯ ಅಮ್ಮನಾಗುತ್ತಾರೆ. ತಾವು ಇದ್ದ ಸಮಾಜದಲ್ಲಿಯ ಎಲ್ಲ ಬಗೆಯ ಜನರನ್ನೂ ಒಳಗೊಳ್ಳುತ್ತಾರೆ. ಮೇಲ್ಜಾತಿಯವರು, ಸಮಾಜದ ಅಂಚಿನಲ್ಲಿ ಉಳಿದವರು, ದುಡಿಯುವ ಹೆಂಗಸರು, ಊರು ಬಿಟ್ಟು ಹೋದವರು ಮತ್ತು ಬಂದು ಸೇರುವವರು,ಉದ್ಯೋಗ ಕಳೆದುಕೊಂಡುವರು, ಪುಟಗೋಸಿ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಆರೋಗ್ಯ ಇಲಾಖೆಯವರು, ಶಿಕ್ಷಕರು, ಶಾಲೆಯ ಮಕ್ಕಳು ಹೀಗೆ ಕವಲಕ್ಕಿಯೆಂಬ ಪುಟ್ಟಜಗತ್ತಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಇಲ್ಲಿದೆ. ಇದನ್ನು ಓದುತ್ತಾ ಓದುತ್ತಾ ಜಗತ್ತನ್ನೇ ಪೀಡಿಸುತ್ತಿರುವ ಕೊರೋನ ಹಿನ್ನೆಲೆಗೆ ಸರಿದು ಕವಲಕ್ಕಿಯ ಕೊರೋನಾದ ಬಗೆಗೆ ಆತಂಕವಾಗಿ ಬಿಡುತ್ತದೆ. ಅನುಪಮಾ ಅವರ ಲವಲವಿಕೆಯ ಬರವಣಿಗೆ ಇದೆಲ್ಲವನ್ನೂ ಕಣ್ಣ ಮುಂದೆ ದೃಷ್ಯವಾಗಿ ಕಟ್ಟಿಕೊಡುತ್ತದೆ ಎನ್ನುತ್ತಾರೆ ರಜನಿ ಗರುಡ. ಈ ಸಾಂಕ್ರಾಮಿಕ ರೋಗದ ಪ್ರಾಥಮಿಕ ಅರಿವಾದರೂ ನನ್ನ ಜನರಿಗೆ ಬರಲಿ ಎಂದು ಬೇಡಿಕೊಳ್ಳುವಂತಾಗುತ್ತದೆ ಎಂದಿದ್ದಾರೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE