ಕಾರ್ಪೋರೇಟ್ ಜಗತ್ತಿನ ನೋವು-ನಲಿವುಗಳು

Author : ಮಾಲತಿ ಮುದಕವಿ

Pages 168

₹ 170.00




Year of Publication: 2023
Published by: ಸಾಗರಿ ಪ್ರಕಾಶನ
Address: # 275/ಎಫ್ 6-1, ಮೊದಲ ಮಹಡಿ, 4 ನೇ ವೆಸ್ಟ್ ಕ್ರಾಸ್, ಉತ್ತರಾದಿ ಮಠದ ರಸ್ತೆ, ಮೈಸೂರು - 570 004
Phone: 9740129274

Synopsys

'ಕುರ್ಚಿಯ ನಿರ್ಮಾಣದಲ್ಲಿ ಮೊಳೆಗಳ ಹಾಗೆ' ಕಥೆಯಲ್ಲಿ ತಂತ್ರದ ಬಳಕೆ ಆಗಬೇಕು. ಅದು ಕಣ್ಣಿಗೆ ಕಾಣಬಾರದು, ಕೈಗೆ ಸಿಗಬಾರದು, ಇದ್ದೂ ಇರದ ಹಾಗಿರಬೇಕು. ಮನಸ್ಸಿನಲ್ಲಿ ಮೂಡಿದ ಕಥೆಗಳು ಅದ್ಭುತವಾಗಿರುತ್ತವೆ. ಬರೆಯುತ್ತಾ ಹೋದಂತೆ ನಾನು ಹೇಳಬೇಕಾದ್ದು ಇದಲ್ಲ ಎಂದು ಹಲವು ಬಾರಿ ನಿರಾಸೆಯಾಗುತ್ತದೆ. ಮೂಲದಲ್ಲಿ ಮೂಡಿದ ಕಥೆ ಬೇರೆ ಬೇರೆ ತಿರುವುಗಳನ್ನು ಪಡೆದು ಬೆಳೆಯುತ್ತದೆ' ಎಂದು ವಿವೇಕ ಶಾನಭಾಗ ಅವರು ಕಥೆಯ ಸೃಷ್ಟಿ ಕ್ರಿಯೆಯ ಬಗ್ಗೆ ಹೇಳುತ್ತಾರೆ. ಇದು ಎಲ್ಲ ಕಥೆಗಾರರೂ ಅನುಭವಿಸುವ ತುಮುಲವೇ! ಬರೆಯುತ್ತ ಹೋದಂತೆ ಪಾತ್ರಗಳು ಅವನ ಕೈಯಲ್ಲಿ ಆಡದೆ ಅವನೇ ಪಾತ್ರಗಳ ಕೈಗೊಂಬೆಯಾಗಿ ಬಿಡುತ್ತಾನೆ. ಮೊದಲಾದರೆ ಒಂದು ಹೆಣ್ಣು ಮದುವೆಯಾಗಿ ಹೋಗುವುದು ಗಂಡನೊಬ್ಬನನ್ನೇ ಅಲ್ಲ, ಇಡಿ ಕುಟುಂಬವನ್ನೇ ಎಂಬ ನಂಬಿಕೆಯಿತ್ತು. ಅದಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸುತ್ತಿದ್ದರು. ಅತ್ತೆ-ಮಾವ, ನಾದಿನಿಯರು, ಭಾವಂದಿರು, ಮೈದುನಂದಿರು, ಓರಗಿತ್ತಿಯರು ಅಷ್ಟೇ ಅಲ್ಲ, ಮನೆಯಲ್ಲಿ ಇರುವಂಥ ಅವರ ರಕ್ತಸಂಬಂಧಿಗಳಿಗೂ ಕೂಡ ಅವರವರಿಗೆ ತಕ್ಕಂಥ ಮರ್ಯಾದೆಯನ್ನು ಕೊಟ್ಟು ಬಾಳಬೇಕಾಗುತ್ತಿತ್ತು. ಯಾರಿಗೂ ಎದುರು ಮಾತನಾಡದೆ, ಎಲ್ಲರ ಸೇವೆಯನ್ನೂ ಮಾಡುತ್ತ, ಯಾರಿಂದಲೂ ಬೆರಳು ಮಾಡಿ ತೋರಿಸುವಂಥ ಸಂದರ್ಭಕ್ಕೆಡೆ ಮಾಡಿಕೊಡದೆ ಇದ್ದಲ್ಲಿ ಅವಳು ಒಬ್ಬ ಸಂಸ್ಕಾರವಂತ ಸೊಸೆ ಎನ್ನಿಸುತ್ತಿದ್ದಳು. ಹಾಗೆ ಬಾಳಿದವರು ನಮ್ಮ ಹಿರಿಯರು. ಆ ಕಾಲಘಟ್ಟದಲ್ಲಿ ಅಂಥದೇ ಕಥೆಗಳು ಹುಟ್ಟಿಕೊಂಡವು. ಆದರೆ ನಮ್ಮ ಕಾಲವು ಸ್ವಲ್ಪ ಕ್ರಾಂತಿಗೆ ಹುಟ್ಟು ಹಾಕಿತ್ತು.. ಸೊಸೆಗೆ ವಿದ್ಯೆ, ತಿಳಿವಳಿಕೆ ಎಲ್ಲವೂ ದೊರಕಿದಾಗ ಅವಳು ಅನ್ಯಾಯದ ವಿರುದ್ಧ ಸಿಡಿದು ನಿಂತಳು.. ಅಂಥವಳು ಕೆಲವರ ಬಾಯಲ್ಲಿ ಬಜಾರಿಯಾಗಿ ಕಂಡರೂ ಇನ್ನು ಕೆಲವರು ಅವಳ ವ್ಯಕ್ತಿತ್ವಕ್ಕೆ ಸೈ ಎಂದರು. ಆಗ ಅಂಥ ಕಥೆಗಳು ಹುಟ್ಟಿಕೊಂಡವು. ಅದು ಅನ್ಯಾಯವನ್ನು, ಅಂಧಶ್ರದ್ಧೆಗಳನ್ನು, ಸಮಾಜದ ಕೆಲವು ಮೂಢ ಆಚರಣೆಗಳನ್ನು ಖಂಡಿಸುವ ಕಾಲ. ಅಂತೆಯೇ ಅಂಥ ಕಥೆಗಳು ಹುಟ್ಟಿಕೊಂಡವು. ಜನಪ್ರಿಯವಾದವು. ಆದರೆ ಇದು ಆಧುನಿಕ ಕಾಲ. ನಾವಿಬ್ಬರು ನಮಗಿಬ್ಬರು ಎಂಬ ಸ್ಲೋಗನ್ ಈಗ ಚಲಾವಣೆಯಲ್ಲಿದೆ. ಅದಕ್ಕೆ ತಕ್ಕಂತೆ ನ್ಯೂಕ್ಲಿಯರ್ ಕುಟುಂಬಗಳೇ ಹೆಚ್ಚು. ಗಂಡ-ಹೆಂಡತಿಯರಿಬ್ಬರೇ ಇದ್ದರೆ ಅವರು ಅತ್ಯಂತ ಖುಶಿಯಲ್ಲಿರುತ್ತಾರೆ, ಸಮಸ್ಯೆಗಳೇ ಇರದ ಜೀವನ ಅವರದು ಎಂದರೆ ನಿಮ್ಮದು ತಪ್ಪು ಗ್ರಹಿಕೆ. ಸಮಸ್ಯೆಗಳು ಎಲ್ಲ ಕಾಲಕ್ಕೂ ಇವೆ. ಆದರೆ ಅವುಗಳ ರೂಪ ಮಾತ್ರ ವಿಭಿನ್ನ. ಅವುಗಳನ್ನು ಎದುರಿಸುವಂಥ ಸಂಕ್ರಮಣ ಕಾಲವೇ ಕಥೆಗೆ ವಸ್ತುವಾಗಿ ಹೊರಹೊಮ್ಮುವುದು! ಹೀಗೆ ಆಯಾ ಕಾಲಘಟ್ಟದ ನೋವು-ನಲಿವುಗಳೇ ಕಥೆಗೆ ವಸ್ತುವಾಗುತ್ತವೆ. ಅವೇ ಕಥಾವಸ್ತುಗಳೇ ಚಲಾವಣೆಗೂ ನಿಲುಕುತ್ತವೆ.

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books