ಚಿಂತಕಿ, ಬರಹಗಾರ್ತಿ, ವೈದ್ಯೆ ಎಚ್.ಎಸ್. ಅನುಪಮಾ ಅವರ ಹದಿನೆಂಟು ಕತೆಗಳ ಸಂಕಲನ ’ಚಿವುಟಿದಷ್ಟೂ ಚಿಗುರು’. ಉತ್ತರ ಕನ್ನಡ ಜಿಲ್ಲೆಯ ದಟ್ಟಕಾಡಿನ ನಡುವೆ ಹಲವು ವರ್ಷಗಳಿಂದ ಆದಿವಾಸಿಗಳಿಗೆ ವೈದ್ಯಕೀಯ ಸೇವೆ ಒದಗಿಸುತ್ತಿರುವ ಅವರು ’ಡ್ರಾಕ್ಟ್ರಮ್ಮನ ಡೈರಿ’ ಭಾಗದಲ್ಲಿ ಆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ’ಚಿಗುರು’ ಭಾಗದಲ್ಲಿ ಹನ್ನೆರಡು ಕತೆಗಳಿವೆ. ಹಳ್ಳಿಗರ ಮುಗ್ಧತೆ, ಸಾಮಾಜಿಕ ಸಮಸ್ಯೆಗಳು ಕತೆಗಳಲ್ಲಿ ಹರಳುಗಟ್ಟಿವೆ. ತಳಮಟ್ಟದ ಜನರನ್ನು ಹತ್ತಿರದಿಂದ ಬಲ್ಲ ಅವರೊಳಗೆ ಸಹಜ ಎನ್ನಿಸುವಂತಹ ಪ್ರತಿರೋಧದ ಅಲೆಯಿದೆ. ಅದು ಸುತ್ತಲಿನ ಸಮಾಜವನ್ನು ಸದಾ ಎಚ್ಚರದಲ್ಲರುವಂತೆ ಪೊರೆಯುತ್ತದೆ.
ವೈಚಾರಿಕ ಬರಹಗಳೇ ಇರಲಿ ಅಥವಾ ಸೃಜನಶೀಲ ಕೃತಿಗಳೇ ಇರಲಿ ಸಾಮಾಜಿಕ ಕಳಕಳಿ ಅವರ ಅಭಿವ್ಯಕ್ತಿಯ ಭಾಗವಾಗಿದೆ. ಅದು ಪ್ರಸ್ತುತ ಕೃತಿಯಲ್ಲಿಯೂ ವ್ಯಕ್ತವಾಗುತ್ತದೆ. ಸ್ತ್ರೀ ಸಂವೇದನೆಯ ಕಾರಣಕ್ಕೂ ಕೃತಿ ಮಹತ್ವದ್ದಾಗಿದೆ.
ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...
READ MORE