ಇಂದು ನಮ್ಮ ಕೌಟುಂಬಿಕ, ಸಾಮಾಜಿಕ ಜೀವನರಂಗವು ಬದಲಾಗಿದೆ, ಬದಲಾಗುತ್ತಿದೆ. ಜೀವನದ ಹೊಸ ಹೊಸ ಪರಿಗಳು ಗೋಚರವಾಗುತ್ತಿವೆ. ವಿಶೇಷವಾಗಿ ಮಹಿಳಾಲೋಕವು ನೂತನ ಸಂದರ್ಭಗಳನ್ನು ಎದುರಿಸುತ್ತಿದೆ. ಅಂಥ ಜೀವನದ ವಾಸ್ತವ ಚಿತ್ರಣ, ಅದರ ಬಗ್ಗೆ ಸೂಕ್ಷ್ಮವಾದ ಚಿಂತನಗಳು, ಬದಲಾದ ಪರಿಸ್ಥಿತಿಯಲ್ಲಿಯೂ ಮುಂದೆ ಸಾಗಿದ ಗಂಡು ಹೆಣ್ಣುಗಳಲ್ಲಿಯ ತಾರತಮ್ಯ, ಹೆಣ್ಣಿನ ಅಸಹಾಯಕ ಸ್ಥಿತಿ, ಅಸ್ತಿತ್ವಕ್ಕೆ ಬಂದ ಹೊಸ ಸಮಸ್ಯೆಗಳು -ಇವೆಲ್ಲವುಗಳಿಗೆ ಪ್ರಸ್ತುತ ಕಥಾ ‘ಚಿತ್ತ ಚಿತ್ತಾರ’ ಸಂಕಲನವು ತನ್ನದೇ ಆದ ವಿಶಿಷ್ಟ ಕನ್ನಡಿಯನ್ನು ಹಿಡಿಯುತ್ತದೆ.
ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ. ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...
READ MORE