ಚಿಂಬ ಹಿಡಿದ ಮೀನು

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

Pages 280

₹ 220.00




Year of Publication: 2016
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ ಶಿವಮೊಗ್ಗ - 577 201

Synopsys

ಭಾರತೀಸುತ ಅವರ ಸಣ್ಣ ಕಥಾ ಸಂಕಲನ ‘ಚಿಂಬ ಹಿಡಿದ ಮೀನು’. ಆಧುನಿಕ ಕನ್ನಡ ಕಥಾ ಸಾಹಿತ್ಯ ಪರಂಪರೆಯಲ್ಲಿ ಕೊಡಗನ್ನು ಪ್ರತಿನಿಧಿಸುವ ಇಬ್ಬರು ಶ್ರೇಷ್ಠ ಸಾಹಿತಿಗಳಲ್ಲಿ ಭಾರತೀಸುತರು ಅಗ್ರಗಣ್ಯರು. ಇವರು ಇತರೆ ಸಾಹಿತ್ಯ ಪ್ರಕಾರಗಳಲ್ಲೂ ಪಳಗಿದವರು ಎಂಬುದು ಅವರ ಹಿರಿಮೆ. ನವೋದಯ ಮತ್ತು ನವ್ಯದ ನಡುವಣ ಪ್ರಗತಿಶೀಲ ಪಂಥದೊಂದಿಗೆ ಗುರುತಿಸಬಹುದಾದ ಸಾಹಿತ್ಯ ರಚನೆ ಭಾರತೀಸುತರದ್ದು.

ಇಲ್ಲಿ ವಿವಿಧ ಮಜಲುಗಳ ಕತೆಗಳಿವೆ. ಕೊಡಗಿನ ಹಿನ್ನೆಲೆಯ ರಮಣೀಯ ಪ್ರಕೃತಿ, ಹಸಿರು ದಟ್ಟ ಕಾನನದ, ಬೆಟ್ಟಗುಡ್ಡಗಳ, ಝರಿತೊರೆಗಳೊಳಗೆ ಬಡ ಬದುಕಿನ ವಾಸ್ತವವನ್ನು ಮತ್ತು ವಿಭಿನ್ನ ಸಂಸ್ಕತಿಗಳ ಅಂತರವನ್ನು ಶೋಧಿಸುವ ಕಾಯಕವನ್ನು ಭಾರತೀಸುತರ ಸಾಹಿತ್ಯ ಮಾಡುತ್ತದೆ. ಬಡತನ, ಕಷ್ಟಕಾರ್ಪಣ್ಯಗಳ ದಯನೀಯ ಬರಡು ಬದುಕಿನಲ್ಲಿ, ಒರಟು ಮುಖಾಮುಖಿಯಲ್ಲಿ ನವಿರಾಗಿ ಹಾದುಹೋಗುವ, ಅಸ್ಪೃಶ್ಯತೆಯ ಹಂಗಿಲ್ಲದ ಜೀವಂತ ಒಳಸುಳಿಗಳನ್ನು ಇಲ್ಲಿಯ ಪಾತ್ರಗಳು ಅನುಭವಿಸುತ್ತವೆ ಮತ್ತು ಓದುಗನಿಗೆ ದರ್ಶಿಸುತ್ತವೆ. ಶೋಷಣೆಯ ಕರಾಳಬಣ್ಣವನ್ನು, ತೋರಿಕೆಯ ಬದುಕನ್ನು, ನಿರ್ದಾಕ್ಷಿಣ್ಯವಾಗಿ ಟೀಕಿಸುವ ಕೆಲಸವನ್ನೂ ಮಾಡುತ್ತವೆ.

ಸುಸೂತ್ರವಾಗಿ ಓದಿಸಿಕೊಂಡು ಹೋಗುವ ನೇರ ನಿರೂಪಣೆಯ ಈ ಕತೆಗಳು ಭಾರತೀಸುತರ ಕಾಲಘಟ್ಟದ ಮತ್ತು ಪ್ರಾದೇಶಿಕತೆಯ ಸಮರ್ಥ ವಕ್ತಾರರಂತಿದ್ದು ಜನಮಾನಸದಲ್ಲಿ ಉಳಿಯಬೇಕಾದ ಎಲ್ಲ ಅರ್ಹತೆಯನ್ನೂ ಹೊಂದಿವೆ. ವಿನ್ಯಾಸ ಮತ್ತು ಪ್ರಕಾರದಲ್ಲಿ ಇವು ಸಣ್ಣಕತೆಗಳು ಇಲ್ಲವೇ ನೀಳ್ಗಥೆಗಳು. ಆದರೆ ವ್ಯಾಪ್ತಿಯಲ್ಲಿ ದೊಡ್ಡಕತೆಗಳು.

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books