ಚಿಯರ್ಸ್’ ಜೋಗಿ ಅವರ ಕಥಾಸಂಕಲನವಾಗಿದೆ. ಅಂತೋಣಿ ನೀರಿನಲ್ಲಿ ಮುಳುಗಿ ಸಾಯುವುದಕ್ಕೆ ಮೊದಲು ಏನು ಹೇಳಿದ ಅನ್ನುವುದು ಮಹದೇವನಿಗೆ ಒಗಟಾಗಿಯೇ ಉಳಿದಿದೆ. ಮೂರನೇ ಸಲ ನೀರಿನಿಂದ ಮೇಲೇಳುವ ಹೊತ್ತಿಗೆ ಅಂತೋಣಿಯ ಶ್ವಾಸಕೋಶದೊಳಗೆ ನೀರು ಹೊಕ್ಕಿತ್ತು. ಅವನು ಕೈ ಮೇಲಕ್ಕೆತ್ತಿ ಮಹದೇವನ ಕಡೆ ಕಣ್ಣು ತಿರುಗಿಸಿ ಏನೋ ಹೇಳಿದ. ಅದು ನೀರೊಳಗೆ ಉಸಿರುಬಿಟ್ಟಂತೆ ಗುಳುಗುಳಗುಳುಗುಳ ಸದ್ದು ಮಾಡಿತೇ ಹೊರತು, ಮಹದೇವನಿಗೆ ಒಂಚೂರೂ ಅರ್ಥವಾಗಿರಲಿಲ್ಲ. ಅದಾದ ಕೂಡಲೇ ಮತ್ತೊಂದು ಸಲ ನೀರಲ್ಲಿ ಮುಳುಗಿದ ಅಂತೋಣಿ ಮೇಲೆ ಬರಲಿಲ್ಲ ಈ ಘಟನೆ ನಡೆದಾಗ ಮಹದೇವನಿಗೆ ಹತ್ತೊಂಬತ್ತು ಅಂತೋಣಿಗೆ ಇಪ್ಪತ್ತೇಳು. ಮಹದೇವ ಹದಿನಾಲ್ಕು ವರ್ಷದವನಿದ್ದಾಗ ಅವನಿಗೆ ಅಂತೋಣಿ ಸಿಕ್ಕಿದ್ದ ಮಹದೇವನಿಗೆ ಅಂತೋಣಿ ಇಷ್ಟವಾಗಲಿಕ್ಕೆ ಕಾರಣ ಅವನು ಹೇಳುತ್ತಿದ್ದ ಪೋಲಿ ಕತೆಗಳು. ಅವನು ಹೊಟ್ಟೆಯೊಳಗೆ ಅಡಗಿಸಿಟ್ಟುಕೊಂಡು ತೋರಿಸುತ್ತಿದ್ದ ಬೆತ್ತಲೆ ಪುಸ್ತಕ. ಅದನ್ನು ಮಹದೇವನ ಕಣ್ಣೆದುರು ಹಿಡಿದು ಅಂತೋಣಿ ಮಹದೇವನಿಗೆ ಹೊಟ್ಟೆ ತೊಳಸುವಂತೆ ಮಾಡುತ್ತಿದ್ದ. ಆದರೂ ಮತ್ತೆ ಮತ್ತೆ ಅದನ್ನು ನೋಡಬೇಕು ಅಂತ ಮಹದೇವನಿಗೆ ಅನ್ನಿಸುತ್ತಿತ್ತು. ( ಆಯ್ದ ಭಾಗ).
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...
READ MOREಚಿಯರ್ಸ್ ಅಮರ್ ಅಂತೋಣಿ - ವಿಸ್ತಾರ