ಬದುಕಿನ ಕಟು ವಾಸ್ತವ ಚಿತ್ರಣದ ಮೂಲಕ ಓದುಗರಿಗೆ ವಾಸ್ತವದ ಅರಿವು ಮೂಡಿಸುವ ಕೆಲಸ ಇಲ್ಲಿy ಕತೆಗಳಲ್ಲಿ ನಡೆದಿದೆ. ಮೀನಾ ಕಾಕೋಡಕಾರ್ ಅವರು ಕೊಂಕಣಿಯಲ್ಲಿ ರಚಿಸಿದ್ದ ಕತೆಗಳನ್ನು ಗೀತಾ ಶೆಣೈ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಸಂಕಲನದ ಬಹುಪಾಲು ಕತೆಗಳು ಗ್ರಾಮೀಣ ಹಿನ್ನೆಲೆ ಹೊಂದಿದ್ದು, ಸ್ತ್ರೀಪಾತ್ರ ಕೇಂದ್ರಿತವಾಗಿದೆ. ಹಳ್ಳಿ ಪ್ರದೇಶದ ಬಡ ಹೆಣ್ಣುಮಕ್ಕಳ ಮುಗ್ಧತೆ, ಅವರಲ್ಲಿ ಸುಪ್ತವಾಗಿರುವ ತಾಯ್ತನದ ಬಯಕೆ, ಹೆತ್ತಮಕ್ಕಳನ್ನು ಪೋಷಿಸಿ ಬೆಳೆಸಲು ಅವರು ಎದುರಿಸುವ ಸಮಸ್ಯೆಗಳು ಇವೆಲ್ಲವನ್ನೂ ನೈಜಭಾವದಿಂದ ಇಲ್ಲಿ ಚಿತ್ರಿಸಲಾಗಿದೆ. ಎರಡು ಹೊತ್ತಿನ ಗಂಜಿಯನ್ನು ಸಂಪಾದಿಸಲು ಕಷ್ಟಪಡುವ ಕುಟುಂಬಗಳ ದಿನನಿತ್ಯದ ಹೋರಾಟದ ಮುಂದೆ ಆದರ್ಶದ ಬೋಧನೆ ಹುಸಿಯಾಗುವುದನ್ನು,, ವ್ಯಕ್ತಿಯ ಅನೈತಿಕತೆ, ಸಂದೇಹ ಪ್ರವೃತ್ತಿ ಮತ್ತು ಲಾಲಸೆಯ ಎದುರು ಕಟ್ಟಿಕೊಂಡ ಬದುಕು ಕುಸಿಯುವುದನ್ನು ಲೇಖಕಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE