ಬುದ್ಧ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು

Author : ಸಿ.ಎಚ್. ರಾಜಶೇಖರ್

Pages 156

₹ 108.00




Year of Publication: 2014
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: #658, 3ನೇ ಅಡ್ಡ ರಸ್ತೆ, ಟೀಚರ್‍ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು
Phone: 7829068573

Synopsys

ಲೇಖಕಿ ಸಿ.ಎಚ್. ರಾಜಶೇಖರ ಅವರ ಕೃತಿ-ಬುದ್ಧ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು. ಅಮರ ಜಾತಕ ಕಥೆಗಳನ್ನು ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗಿದೆ. ಇವುಗಳು ನಮ್ಮ ತಪ್ಪು, ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಕುಬ್ಜತೆಯನ್ನು ಮನದಟ್ಟು ಮಾಡಿಕೊಡುವುದುರ ಜೊತೆಗೆ ಒಳ್ಳೆಯ ಮಾರ್ಗವನ್ನು ಅನುಸರಿಸಿದಾಗ ಮಾತ್ರ ಒಳ್ಳೆಯ ಫಲವನ್ನು ಪಡೆಯಬಹುದು ಎಂಬುದನ್ನು ದೃಢಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಜಾತಕ ಕಥೆಗಳನ್ನು ಧರ್ಮಗ್ರಂಥವೆಂದು ಅಂಗೀಕರಿಸಲಾಗಿದೆ. ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. 25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟಿಸಿದೆ. ಆಮ್ರಪಾಲಿಯ ಕಥೆ ಸೇರಿದಂತೆ ಇತರೆ ಕಥೆಗಳು ಇಲ್ಲಿ ಸಂಕಲನಗೊಂಡಿವೆ. ಈ ಕೃತಿಯು 20 ಶೀರ್ಷಿಕೆಗಳಾದ, ಕರ್ಮವೆಂದರೆ ವಿಧಿ ಬರಹ ಅಲ್ಲೆಂದ ಬುದ್ಧ, ದೇವರೆಂದರೆ ನಾವು ನೋಡದ ಹೆಣ್ಣ ಪ್ರೀತಿಸಿದಂತೆ, ಉಜ್ಜಯನೇ ಕೇಳ್ ಯೋಗ್ಯವಲ್ಲವು, ಯಜ್ಞದಲ್ಲಿ ಹುರುಳಿಲ್ಲವೆಂದ ಬುದ್ಧ ಯಜ್ಞ, ಯಜ್ಞ ಅಲ್ಲವು ಅಮೋದ ಪ್ರಮೋದದ ಕಸಾಯಿಖಾನೆ, ಅಸ್ಸಲಯನನೇ ಕೇಳ್ ವೇದ ಆದರ್ಶವಲ್ಲ, ಬುದ್ಧರ ನ್ಯಾಯನಿಷ್ಟುರತೆ ಹೀಗಿತ್ತು, ಕುರುಡು ನಂಬಿಕೆ ಸಲ್ಲದು, ನಿನ್ನ ಮತ್ತು ಇತರರ ಒಳಿತೇ ಕಲ್ಯಾಣ, ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು, ಉಪಾಲಿ ಒಮ್ಮೆಲೆ ಒಪ್ಪದಿರು ನನ್ನನೆಂದ ಬುದ್ಧ, ಬುದ್ಧ ನಿರಾಕರಿಸಿದ ಆ ಹತ್ತು ಪ್ರಶ್ನೆಗಳ !, ಗಳಿಸಿಡುವುದು ತರವಲ್ಲ, ಬುದ್ಧನ ಬಳಿ ಹೋದ ಭಾರದ್ವಾಜ ಪಾವನನಾದ, ನಾವು ಪ್ರೀತಿಸಿದವರಿಂದಲೇ ದುಃಖ ಖಚಿತ, ಸಾಲವ ಗೆದ್ದರೆ ದಾರಿದ್ರ ಬಯಲು, ಪ್ರಯೋಜನಕ್ಕಾಗಿ ಸೇವೆಯಲ್ಲಿ ಅಪರಾಧ ನೀಗಲು, ವಿದ್ಯೆ ಶೂದ್ರಂಗೆ ನೀಡದಿರೆ ಘೋರಾಪರಾಧವೆಂದ ಬುದ್ಧ, ನಾನು ತೊಡೆದದ್ದು ನಿಮ್ಮ ಅಜ್ಞಾನ, ಬುದ್ಧರ ಬರುವಿಕೆಗಾಗಿ ಕಾಯ್ದು ನಿಂತರು ನಿಷ್ಠೆಯಲಿ ಇವುಗಳನ್ನು ಒಳಗೊಂಡಿರುತ್ತದೆ. 

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books