‘ಬುದ್ಧ ಹೆಣ್ಣು ಎಂದರೆ ಏನು…!!’ ಕೃತಿಯು ಸಿ. ಎಚ್ ರಾಜಶೇಖರ್ ಅವರ ಸಣ್ಣ ಕತಾ ಸಂಕಲನ. ಅಮರ ಜಾತಕ ಕಥೆಗಳ ಭಾಗದ ಬಿಡಿ ಸಂಪುಟ-6ನೇ ಕೃತಿ ಇದಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಆನಂದ ಭಂತೆ ಅವರು, ಗೌತಮ ಬುದ್ಧರು ಬಹಳ ಹಿಂದೆ ಒಂದು ಜನ್ಮದಲ್ಲಿ ಸುಮೇಧ ಎಂಬ ಹೆಸರಿನಲ್ಲಿ ರಾಜಕುಮಾರನಾಗಿ ಹುಟ್ಟಿದ್ದರು. ತಂದೆ ತೀರಿ ಹೋದ ಮೇಲೆ ರಾಜಪಟ್ಟವನ್ನು ತ್ಯಜಿಸಿ ಎಲ್ಲಾ ಐಶ್ವರ್ಯವನ್ನು ದಾನ ಮಾಡಿ ಸಂನ್ಯಾಸಿಯಾಗಿ ಧ್ಯಾನ ಮಾಡಲು ಹಿಮಾಲಯಕ್ಕೆ ತೆರಳಿದರು. ಒಮ್ಮೆ ಭಿಕ್ಷಾಟನೆ ಮಾಡಲು ಸುಮೇಧರು ಅಮರವತಿ ಪಟ್ಟಣಕ್ಕೆ ಬಂದರು. ಅಲ್ಲಿ ನಡೆಯುತ್ತಿರುವ ತಯಾರಿ ಮತ್ತು ಸಡಗರವನ್ನು ನೋಡಿ ಅಲ್ಲಿಯ ಜನರನ್ನು ಕೇಳಿದಾಗ ಭಗವಾನ್ ದೀಪಂಕರ ಬುದ್ಧರು ತಮ್ಮ ಅನುಯಾಯಿಗಳೊಂದಿಗೆ ಅಲ್ಲಿಗೆ ಬರುತ್ತಿರುವ ವಿಷಯ ತಿಳಿಯಿತು. ತಾನೂ ಅಳಿಲು ಸೇವೆ ಮಾಡಬೇಕೆಂದು ದಾರಿಯಲ್ಲಿದ್ದ ಗುಂಡಿಯನ್ನು ತುಂಬಲು ಪ್ರಾರಂಭಿಸಿದರು. ಅದನ್ನು ತುಂಬುವ ಮೊದಲೇ ಭಗವಾನ್ ದೀಪಂಕರ ಬುದ್ಧರು ಆಗಮಿಸಿದರು. ಆಗ ಅವರ ತೇಜಸ್ಸು ಮತ್ತು ಕರುಣಾಮಯಿ ವ್ಯಕ್ತಿತ್ವವನ್ನು ಕಂಡು ತಾನೂ ಬುದ್ಧನಾಗಬೇಕೆಂಬ ಸಂಕಲ್ಪವನ್ನು ವ್ಯಕ್ತಪಡಿಸಿದರು ಎಂಬಂತಹ ಹಲವಾರು ವಿಚಾರಗಳನ್ನು ಈ ಕೃತಿಯು ಕಟ್ಟಿಕೊಡುತ್ತದೆ. ಬುದ್ಧನ ಜಾತಕ ಕಥೆಗಳು ಕೂಡಾ ಇವೆಲ್ಲವನ್ನು ವಿವರಿಸುತ್ತದೆ. ಒಟ್ಟು 547 ಜನ್ಮಕಥೆಗಳಿದ್ದು, ಅವುಗಳೇ ಬುದ್ಧನ ಜಾತಕ ಕಥೆಗಳಾಗಿವೆ. ಪ್ರತಿಯೊಂದು ಕಥೆ ಜೀವನಕ್ಕೆ ಮಾರ್ಗದರ್ಶನವನ್ನು ನೀಡುತ್ತದೆ. ಜಾತಕ ಕಥೆಗಳು ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಿಕದಲ್ಲಿನ ಸುತ್ತಪಿಟಕದ ಭಾಗವಾಗಿರುವ ಖುದ್ಧಕ ನಿಕಾಯದ ಒಂದು ಗ್ರಂಥಮಾಲೆಯಾಗಿದೆ ಎಂದಿದ್ದಾರೆ. ಈ ಕೃತಿಯು ಸತ್ಪುರುಷರ ಬಳಿ ಹೋಗುವುದೇ ಶ್ರೇಯಸ್ಸು, ನನಗೂ ಸ್ವಲ್ಪ ಮಾಂಸ ಕೊಡು, ಪುರೋಹಿತ ಧರ್ಮವನ್ನೇಕೆ ಮಾರಿದೆ, ತುಪ್ಪದನ್ನಕ್ಕಾಗಿ, ನಾವೇಕೆ ನಮ್ಮ ದೌರ್ಬಲ್ಯವನ್ನು ಜಯಿಸಬೇಕು, ಬೋಧಿಸತ್ವರೆ ನಮಗೇಕೆ ಪುರೋಹಿತ ಪದವಿ ಬೇಡ, ಕಳ್ಳ ಸಿಕ್ಕರೆ ಬೇವಿನ ಮರಕ್ಕೇನು ನಷ್ಠ, ಹೆಣ್ಣು ಎಂದರೆ ಏನು, ಮೂರ್ಖರೇಕೆ ಮಣ್ಣಿನ ಮಡಿಕೆಯಂತೆ, ರಾಜ ಈಗ ನೀನೆಂಥಹ ವಾದಿ, ಹೌದು ನಾನು ಕುರೂಪಿ ಆದರೆ ಪ್ರೇಮಮಯಿ, ಗೌಜಲು ಹಕ್ಕಿ ಹೇಳಿದ ಕಥೆ, ಒಂದು ಕೊಡೆ ಒಂದು ಜೊತೆ ಪಾದರಕ್ಷೆಯ ಕಥೆಗಳನ್ನು ಒಳಗೊಂಡಿದೆ.
ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...
READ MORE