ಶ್ರೀಧರ್ ಬನವಾಸಿ ಅವರ ಮೂರನೇ ಕಥಾಸಂಕಲನ. ಫಕೀರ ಎಂಬ ಕಾವ್ಯನಾಮದಿಂದ ಬರೆಯುವ ಶ್ರೀಧರ ಅವರ ಕಥೆಗಳಲ್ಲಿ ರೋಚಕತೆ, ಕುತೂಹಲವಷ್ಟೇ ಅಲ್ಲ ವಿಶಿಷ್ಟವೂ ಹೌದು. ಮನುಷ್ಯ ಪ್ರೀತಿಯ ಹುಡುಕಾಟ, ಧಾವಂತ, ಕಾತರಗಳು ಕಥೆಗಳ ಜೀವಸೆಲೆ. ವ್ಯಕ್ತಿಗಳ ಭಾವನೆ, ಪಾಪಪ್ರಜ್ಞೆ ಕನಸು, ಸಣ್ಣತನ, ದೊಡಸ್ತಿಕೆ ಮುಂತಾದವುಗಳನ್ನು ಫಕೀರರು ತನ್ನ ಕಥೆಯಲ್ಲಿ ಕಟ್ಟಿಕೊಡುತ್ತಾರೆ. ಹೊರಜಗತ್ತಿನ ಯಾವುದೋ ಒಂದು ಹುಡುಕಾಟ, ನಮ್ಮೊಳಗಿನ ಹುಡುಕಾಟವಾಗಿ ಬದಲಾದಾಗ ಆ ಕಥೆ ಬಹುಕಾಲ ಓದುಗನನ್ನು ಕಾಡುತ್ತದೆ.ಇಂಥ ಕಥೆಗಳು ಕನ್ನಡದಲ್ಲಿ ವಿರಳ.
'ಫಕೀರ’ ಎಂಬ ಅಂಕಿತದಲ್ಲಿ ಬರೆಯುವ ಶ್ರೀಧರ ಬನವಾಸಿ ಅವರು ಕತೆ-ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ 1985 ಫೆಬ್ರುವರಿ 6 ರಂದು ಜನಿಸಿದರು. ಬನವಾಸಿ ಉಜಿರೆ ಹಾಗೂ ದಾವಣಗೆರೆಯಲ್ಲಿ ಶಿಕ್ಷಣಾಭ್ಯಾಸ ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜನಿಯರಿಂಗ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಅಧ್ಯಯನ ಮಾಡಿದ್ದಾರೆ. ಕಾಲೇಜು ದಿನಗಳಿಂದಲೇ ಕತೆ, ಕಾವ್ಯ, ಅಂಕಣ ಬರಹಗಳಲ್ಲಿ ಆಸಕ್ತಿ ಇರುವ ಅವರು ‘ಅಮ್ಮನ ಆಟ್ರೋಗ್ರಾಫ್’, ’ದೇವರ ಜೋಳಿಗೆ’, ’ಬ್ರಿಟಿಷ್ ಬಂಗ್ಲೆ’, ‘ಬೇರು’ ಪುಸ್ತಕಗಳ ಮೂಲಕ ಕನ್ನಡ ಕಥಾಕ್ಷೇತ್ರದಲ್ಲಿ ಮಹತ್ವದ ಕಥೆಗಾರರಾಗಿ ಶ್ರೀಧರ ಬನವಾಸಿ ಗುರುತಿಸಿಕೊಂಡಿದ್ದಾರೆ. ಶ್ರೀಧರ್ ಅವರು ಹಲವು ವರ್ಷಗಳ ಕಾಲ ಮಾಧ್ಯಮ ಮತ್ತು ...
READ MOREಕತೆ ಕೇಳೋಣ ಬನ್ನಿ ಸರಣಿಯಲ್ಲಿ ಶ್ರೀಧರ ಬನವಾಸಿ ಅವರಿಂದ ‘ಜೀನದತ್ತನೆಂಬ ಕತೆಗಾರನು’ ಕತೆ ವಾಚನ
ವಸುದೇವ ಭೂಪಾಲಂ ಪ್ರಶಸ್ತಿ