ಬಿರೇಬೆತ್ಲೆ ವೆಂಕಟಸಾಮಿ ಮತ್ತು ಇತರ ಕಥೆಗಳು

Author : ಸ. ರಘುನಾಥ

Pages 100




Year of Publication: 2012
Published by: ಕನ್ನಡನಾಡು ಪ್ರಕಾಶನ
Address: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ - ಜಿ-2, ವಿ.ವಿ, ಹಾಸ್ಟೆಲ್ ಕಾಂಪ್ಲೆಕ್ಸ್, ಸೇಡಂ ರಸ್ತೆ, ಗುಲಬರ್ಗಾ-585 105

Synopsys

ರಘುನಾಥ ಕಥೆ ಹೇಳಲು ಒಂದು ಸುಂದರ ತಾರ್ಕಿಕ ಹಾದಿಯನ್ನು ಹಿಡಿದು ಓದುಗರನ್ನು ಅದರ ಮೇಲೆ ಕೈಹಿಡಿದು ಕರೆದುಕೊಂಡು ಹೋಗುತ್ತಾರೆ. ಇಲ್ಲಿನ ಕಥೆಗಳಲ್ಲಿ ಸಂಭಾಷಣೆಯೇ ಜೀವವಾಗಿರುವಂತೆ, ತರ್ಕಶಾಸ್ತ್ರವು ಪ್ರಾಣವಾಗಿದೆ. ತರ್ಕಶಾಸ್ತ್ರದ ಮುಖೇನ ಪಾತ್ರಗಳಿಗೆ ಮುಖಾಮುಖಿಯಾಗಿ ಪಾತ್ರಗಳ ಗುಣವನ್ನು ಮಥಿಸಲಾಗಿದೆ. ಅವು ಪಾತ್ರಗಳ ಗುಣವಾಗದೆ, ಓದುಗರ ಗುಣವಾಗುವ ಸಾಧ್ಯತೆಯು ಇದೆ.

ನೇರವಾಗಿ ಮುಖಾಮುಖಿಯಾಗಿ ಗರ್ಜಿಸದ ಪಾತ್ರಗಳು ಒಟ್ಟಾರೆ ಕಥಾ ಸಾಂದ್ರತೆಯಲ್ಲಿ ಪರಿಣಾಮ ಫಲಿತಾಂಶಗಳ ಪೊರೆ ಬಿಟ್ಟು ಮುಂದೆ ಸಾಗುತ್ತದೆ. ಪುರಾಣ, ಇತಿಹಾಸ, ವರ್ತಮಾನಗಳು ಸಹ, ಬೇರೆ ಕಣ್ಣುಗಳಿಂದ ಗ್ರಹಿಸಲು ಸಾಧ್ಯ ಎಂಬುದನ್ನು ಇಲ್ಲಿನ ಕಥೆಗಳು ಹೇಳುತ್ತವೆ.

About the Author

ಸ. ರಘುನಾಥ
(13 August 1954)

ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ  ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ  - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...

READ MORE

Related Books