ಬೇವು ಬೆಲ್ಲ ಶೋಭಾ ಹರಿಪ್ರಸಾದ್ ಅವರ ಕಥಾಸಂಕಲನವಾಗಿದೆ. ಶೋಭಾರವರು ಇಂರ್ದ ವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ, ಜೊತೆಗೆ ಸರಳ ನಿರೂಪಣೆಯಿಂದ ಹಳ್ಳಿ ಬದುಕಿನ ಸೊಗಡನ್ನು ಓದುಗರ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕರಾವಳಿ ಭಾಗದ ಜನರ ಬದುಕಿನ ಸುತ್ತ ಹೇಳಿದಿರುವ ಕಥೆ ಓದುಗರನ್ನು ತನ್ನತ್ತ ಸೆಳೆದು ಕೊಳ್ಳುವುದರಲ್ಲಿ ಸಂಶಯವಿಲ್ಲ. ''ಬೇವು ಬೆಲ್ಲ' ಕಥಾ ಸಂಕಲನ ಪುಟ್ಟದಾದರೂ ನೀಡಿರುವ ಸಂದೇಶ ದೊಡ್ಡದು. ಹೀಗೆ ಕನ್ನಡ ಸಾಹಿತ್ಯ ರಚನೆಯಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡು, ಭರವಸೆಯ ಬೆಳಕು ಮೂಡಿಸಿ, ದಿಟ್ಟ ಹೆಜ್ಜೆಯೊಂದಿಗೆ ಸಾಗುತ್ತಿರುವ ಶ್ರೀಮತಿ ಶೋಭಾರವರ ಲೇಖನಿಯಿಂದ ಇನ್ನಷ್ಟು ಉತ್ತಮ ಕೃತಿಗಳು ರಚನೆಯಾಗಲಿ, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಭಾವನ್ನು ಮೂಡಿಸಿರುವ ಶ್ರೀಮತಿ ಶೋಭಾರವರಿಗೆ ಇನ್ನಷ್ಟು ಯಶಸ್ಸು ಲಭಿಸಿ, ಅವರ ಕೃತಿಗಳು ಜನಮಾನಸದಲ್ಲಿ ಉಳಿಯಲಿ ಎಂದು ಹಾರೈಸುತ್ತೇನೆ ಎಂದು ಗೀತಾ ದೇವಿ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಶೋಭಾ ಹರಿಪ್ರಸಾದ್ ಮೂಲತಃ ಸಾಲಿಕೇರಿಯವರು. ತಾಯಿ ಲಲಿತಾ ಶೆಟ್ಟಿಗಾರ್ ತಂದೆ ನಾರಾಯಣ ಶೆಟ್ಟಿಗಾರ್. ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿದ್ಯಾಮಂದಿರದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಪೂರ್ಣಗೊಳಿಸಿ ಹೈಸ್ಕೂಲ್ ಮತ್ತು ಬಿ. ಎ ಪದವಿಯನ್ನು ಎಸ್ ಎಮ್ ಎಸ್ ಬ್ರಹ್ಮಾವರ ಕಾಲೇಜಿನಲ್ಲಿ ಪೂರ್ಣ ಗೊಳಿಸಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಬಿ.ಎಡ್. ಅನ್ನು ಪೂರ್ಣಗೊಳಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ವರ್ಷದಿಂದ ತೊಡಗಿಸಿ ಕೊಂಡಿದ್ದಾರೆ. ಇವರು ಮೊದಲು ಬರೆದದ್ದು ಬೆರಳೆಣಿಕೆಯಷ್ಟು ಹನಿಗವನ ಮತ್ತು ಕತೆ. ರಾಜ್ಯ ಕವಿ ವೃಕ್ಷ ಪ್ರಶಸ್ತಿ, ವ್ಯಾಕರಣ ಚೂಡಾಮಣಿ ಪ್ರಶಸ್ತಿ ಅವರಿಗೆ ದೊರೆತ ಪ್ರಶಸ್ತಿಗಳಾಗಿವೆ. ಕೃತಿಗಳು : ಚಿಣ್ಣರ ಕನಸಿನ ಬಣ್ಣದ ಲೋಕ ,ಬೇವು ...
READ MORE