ಟಿ.ಕೆ. ರಾಮರಾವ್ ಅವರು ಬರೆದ ಕಥಾ ಸಂಕಲನ-ಬೆಂಕಿಗೂಡು. ಕಾದಂಬರಿ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕರು, ಕಾದಂಬರಿಯಷ್ಟೇ ಸಮರ್ಥವಾಗಿ ಕಥೆಗಳನ್ನು ಸಹ ಬರೆದಿದ್ದು, ಕಥಾ ವಸ್ತು, ನಿರೂಪಣೆ, ಶೈಲಿಯೊಂದಿಗೆ ಓದುಗರ ಗಮನ ಸೆಳೆಯುತ್ತವೆ.
ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931) ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು. ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...
READ MORE