“ಬೆಳದಿಂಗಳು ಮತ್ತು ಮಳೆ” ಎಂಬ ನ್ಯಾನೊ ಕತೆಗಳ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ. ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.
ಬರಹಗಾರ ವಿ.ಗೋಪಕುಮಾರ್ ಅವರು ಹುಟ್ಟಿದ್ದು ಮಂಡ್ಯದಲ್ಲಿ. ಕನ್ನಡ ಮತ್ತು ಇಂಗ್ಲಿಷ್ ಪದವೀಧರರು. ಫೋಟೊಗ್ರಫಿ, ನ್ಯಾನೋ ಕತೆಗಳ ರಚನೆ, ಕನ್ನಡ ಮತ್ತು ಮಲೆಯಾಳಂನಲ್ಲಿ ಸಣ್ಣ ಕತೆಗಳ ರಚನೆ, ಕಿರುಚಿತ್ರಗಳು ಮತ್ತು ಸಾಕ್ಷ್ಯಾಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ ಎರಡು ಚಿತ್ರಗಳು ಕಿರುಚಿತ್ರಕ್ಕೆ ಅತ್ಯುತ್ತಮ ಪ್ರಾಯೋಗಿಕ ಕಿರುಚಿತ್ರ ಪ್ರಶಸ್ತಿ ಲಭಿಸಿದೆ. ಇವರ ಪ್ರಮುಖ ಕೃತಿಗಳೆಂದರೆ ಸಾವಿರ ರೆಕ್ಕೆಗಳ ಪುಸ್ತಕ, ಬೆಳದಿಂಗಳು ಮತ್ತು ಮಳೆ, ವಿಜಯೀಭವ ಹಾಗೂ ಎರಡು ಹನಿ ಮಳೆಯ ಮೋಡ ಮುಂತಾದವು. ...
READ MORE