'ಬತ್ತೀಸ ಪುತ್ತಳಿ ಕಥೆ’ ವೈ.ಸಿ ಭಾನುಮತಿ ಅವರ ಸಂಪಾದಕತ್ವದ ಕಥಾಸಂಕಲನವಾಗಿದೆ. ಈ ಕೃತಿಯು ಬತ್ತೀಸ ಪುತ್ತಳಿ ಕುರಿತು ಮಾತನಾಡುತ್ತದೆ. ಭಾರತದ ಕಥಾ ಇತಿಹಾಸ ಕ್ರಿಸ್ತಪೂರ್ವಕ್ಕೆ ಹೋಗುತ್ತದೆ. ಪಂಚತಂತ್ರ, ಕಥಾ ಸರಿತ್ಸಾಗರ, ಬೃಹತ್ಕಥಾ, ವಿದ್ಯಾಮಂಜರಿಯ ಕಥೆಗಳು, ಬೇತಾಳ ಪಂಚವಿಂಶತಿ ಹೀಗೆ ಒಂದು ಕಥಾಜಗ ನಿರ್ಮಿತವಾಗಿರುವುದನ್ನು ಕಾಣುತ್ತೇವೆ. ಈ ಕಥೆಗಳು ಇಂದಿಗೂ ನಮ್ಮ ಜನರಿಗೆ ಪ್ರಿಯವಾಗಿರುವುದೇ ಇವುಗಳಿಗಿರುವ ಆಕರ್ಷಣೆಯಾಗಿದೆ. ಇವುಗಳಲ್ಲಿ ಭಾರತೀಯ ಪ್ರಾಚೀನ ಜನಜೀವನದ ಪಳೆಯುಳಿಕೆಗಳನ್ನು ಕಾಣಬಹುದು.
ಅತ್ಯಂತ ಪ್ರಾಚೀನ ಕಾಲದಿಂದಲೂ ಇವು ನಮ್ಮ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಂತಾದ ವಿಷಯಗಳನ್ನು ತಮ್ಮಲ್ಲಿ ಉಳಿಸಿಕೊಂಡುಬಂದಿವೆ. ಪ್ರಸ್ತುತ ಬತ್ತೀಸ ಪುತ್ತಳಿ ಕಥೆಗಳೂ ಈ ವರ್ಗಕ್ಕೆ ಸೇರಿದಂಥವುಗಳೆ. ಭಾರತದ ಎಲ್ಲ ಭಾಷೆಗಳಲ್ಲಿಯ ವಿಕ್ರಮಾದಿತ್ಯ ಮತ್ತು ಭೋಜರ ಬಗೆಗಿನ ರೋಚಕ ಕಥೆಗಳು ದೊರೆಯುತ್ತವೆ. ಶನಿದೇವರ ಮಹಾತ್ಮಯಂಥಲ್ಲಿಯೂ ಸಹ ಈ ವಿಕ್ರಮ ಪ್ರಧಾನಸ್ಥಾನ ಪಡೆದಿದ್ದಾನೆ. ಬೇತಾಳ ಪಂಚವಿಂಶತಿ ಕಥೆಗಳಲ್ಲಿ ಸಹ ಈತ ಬರುತ್ತಾನೆ.
ಸತ್ಯ, ನ್ಯಾಯ, ಧರ್ಮ, ಶೌರ್ಯ, ನಿಷ್ಟೆಗಳಿಗೆ ಹೆಸರಾದ ಈ ವಿಕ್ರಮ ಚಾರಿತ್ರಿಕ ವ್ಯಕ್ತಿಯೆ ? ಎಂಬ ಬಗ್ಗೆ ವಾದ ವಿವಾದಗಳಿವೆ. ಕ್ರಿಸ್ತಪೂರ್ವದ ಮೌರ್ಯ ವಂಶದ ಸುಪ್ರಸಿದ್ದ ಚಕ್ರವರ್ತಿ ಸಮುದ್ರಗುಪ್ತನೇ ಇವನು ಎಂಬ ಅಭಿಪ್ರಾಯವೂ ಇದೆ. ಹೂತು ಹೋಗಿದ್ದ ವಿಕ್ರಮ ಸಿಂಹಾಸನದ ದಿಬ್ಬದ ಮೇಲೆ ಕುಳಿತು ನ್ಯಾಯ ತೀರ್ಮಾನ ಮಾಡಿದ ದನ ಕಾಯುವ ಹುಡುಗನ ಕಥೆ ಉಂಟು. ಈ ವಿಕ್ರಮ ಸಿಂಹಾಸನದ ಮೆಟ್ಟಲು ಗಳಲ್ಲಿದ್ದ ಮೂವತ್ತೆರಡು ಗೊಂಬೆಗಳು ಹೇಳಿದ ಕಥೆಗಳೇ ಬತ್ತೀಸ ಪುತ್ತಳಿ ಕಥೆಗಳು.
ಲೇಖಕಿ ವೈ.ಸಿ. ಭಾನುಮತಿಯವರು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಯಮಸಂಧಿ ಗ್ರಾಮದವರು. ವೈ.ಸಿ. ಭಾನುಮತಿಯವರು ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಗ್ರಂಥ ಸಂಪಾದನೆ ಜೊತೆಗೆ ಸಂಶೋಧನ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಜೈನ ಕವಿ ಶ್ರುತಕೀರ್ತಿಯ ಸ್ರ್ತೀಯೋರ್ವಳ ಕತೆಯನ್ನು ಆಧರಿಸಿ ರಚಿಸಿದ ಮೊದಲ ಜೈನ ಕೃತಿ ವಿಜಯ ಕುಮಾರಿ ಚರಿತೆ, ಸುಕುಮಾರ ಚರಿತೆ, ಪುರಾತನರರ ಚರಿತೆ ಮತ್ತು ಶರಣ ನಿಜಚಿಕ್ಕಲಿಂಗಯ್ಯ ಸಾಂಗತ್ಯ ಸೇರಿದಂತೆ ಸುಮಾರು 30 ಮಹತ್ವದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಜಾನಪದ ಕ್ಷೇತ್ರದಲ್ಲಿಯೂ ಆಸಕ್ತರಾಗಿದ್ದ ಅವರು ಇಬ್ಬೀಡಿನ ಜನಪದ ಕಥೆಗಳು, ಮಲೆನಾಡ ಶೈವ ಒಕ್ಕಲಿಗರು, ಜಾನಪದೀಯ ಅಧ್ಯಯನ, ...
READ MORE