‘ಬಣ್ಣದ ನೆರಳು’ ಅಮರೇಂದ್ರ ಹೊಲ್ಲಂಬಳ್ಳಿ ಅವರ ಕಥಾಸಂಕಲನವಾಗಿದೆ. ಕಥಾ ಪ್ರಕಾರವನ್ನು ಅಮರೇಂದ್ರ ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಕತೆಗಳು ಮತ್ತು ನಡೆಸಿರುವ ಪ್ರಯೋಗಗಳೇ ಸಾಕ್ಷಿ ನುಡಿಯುತ್ತವೆ. ಮಾಸ್ತಿಯವರಿಂದ ಹಿಡಿದು ಸಮ ಕಾಲೀನ ಕತೆಗಾರರ ತನಕ ಕನ್ನಡ ಕಥಾಲೋಕವು ಹೊಸದೆನಿಸುವ ತಂತ್ರ ಮತ್ತು ಶೈಲಿಗಳ ಆನ್ವೇಷಣೆ ಯಲ್ಲಿ ಸದಾ ತೊಡಗಿಕೊಂಡಿದೆ. ಆ ಆನ್ವೇಷಣೆಯ ಸಾರ್ಥಕ ಮುಂದುವರಿಕೆಯಾಗಿ ಅಮರೇಂದ್ರರ ಈ ಕತೆಗಳಿವೆ.
1968 ಕೋಲಾರ ಜಿಲ್ಲೆಯ ಹೊಲ್ಲಂಬಳ್ಳಿಯಲ್ಲಿ ಜನಿಸಿದ ಅಮರೇಂದ್ರ ಹೊಲ್ಲಂಬಳ್ಳಿ, 1994ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮರುಮಾತು (ವಿಮರ್ಶಾ ಲೇಖನಗಳ ಸಂಕಲನ) ಸೇರಿದಂತೆ ಹಲವು ಕೃತಿಗಳನನ್ನು ಪ್ರಕಟಿಸಿದ್ದಾರೆ. ‘ಕಾಯ’ ಇವರ ಕಾದಂಬರಿ. ...
READ MORE