ಲೇಖಕ ’ಎನ್ನೇಬಿ’ ಮೊಗ್ರಾಲ್ ಪುತ್ತೂರು ಅವರ ಮೊದಲ ಕಥಾ ಸಂಕಲನ ’ಬಂಜೆತನ ಬಯಸಿದವಳು’. ಕೃತಿಗೆ ಮುನ್ನುಡಿ ಬರೆದ, ಎಸ್.ಆರ್. ವಿಜಯಶಂಕರ, ’ ಇಲ್ಲಿನ ಭಾಷೆಯ ಸಂವಹನ ಸ್ವರೂಪವು ಕಥೆಗಳ ವಿವರಣೆಗಳಲ್ಲೂ, ಸುಂದರ ಪ್ರಸ್ತುತಿಯಲ್ಲೂ ಕಾಣಬಹುದು. ಲೇಖಕರಿಗೆ ಕಥೆ ಹೇಳುವುದರಲ್ಲಿ ನಿರ್ಮಲವಾದೊಂದು ಆನಂದವಿದೆ. ಇಲ್ಲಿ ಬರೆದ ಅಷ್ಟೂ ಕಥೆಗಳಲ್ಲೂ ಕಥೆಗಾರನ; ಕಥೆ ಹೇಳುವಾಗ ಉಂಟಾಗುವ ಉಲ್ಲಾಸ ಹಾಗೂ ಘಟನೆಗಳನ್ನು ವಿವರಿಸುವುದರಲ್ಲಿ ಇರುವ ಉತ್ಸಾಹ ಗೋಚರಿಸುತ್ತದೆ. ಇದು ಇಲ್ಲಿನ ಕಥೆಗಳ ಚೈತನ್ಯ ಶಕ್ತಿ.’ ಎಂದು ಪ್ರಶಂಸಿದ್ದಾರೆ.
ಲೇಖಕ, ಅನುವಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಮೂಲತಃ ಕಾಸರಗೋಡಿನವರು. ಮಂಗಳ ವಾರಪತ್ರಿಕೆಯ ಸಂಪಾದಕರಾಗಿರುವ ಅವರು ಮೂರು ದಶಕಗಳಿಂದ ಪತ್ರಿಕಾ ರಂಗದಲ್ಲಿದ್ದಾರೆ. 'ಬಂಜೆತನ ಬಯಸಿದವಳು' ಇವರ ಚೊಚ್ಚಲ ಕಥಾ ಸಂಕಲನವಾಗಿದ್ದು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಲಯಾಳಂನಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ’ರೂತ್ ಮತ್ತು ರಸುಲ್' ನೀಳ್ಗತೆಯನ್ನು ಮಲಯಾಳಂ ಭಾಷೆಗೂ ಅನುವಾದಿಸಿದ್ದಾರೆ. ...
READ MORE