ಲೇಖಕಿ ಶೈಲಜಾ ಸುರೇಶ್ ಅವರ ಕಥಾ ಸಂಕಲನ-ಬದುಕ ಭಿತ್ತಿಯ ಚಿತ್ರಗಳು. ಬದುಕಿನ ಪ್ರತಿ ಸಣ್ಣ ಸಣ್ಣ ಸಂಗತಿಯೂ, ಅದರದೇ ಆದ ಚೌಕಟ್ಟಿನೊಳಗೆ ಕಥಾ ವಸ್ತುವನ್ನು ಹೊಂದಿರುತ್ತದೆ. ಬದುಕೆಂಬ ಭಿತ್ತಿಯಲ್ಲಿ ಹೀಗೆ ಕಂಡು ಕೊಂಡ ವಿಶೇಷವಾಗಿ ಸ್ತ್ರೀ-ದೌರ್ಜನ್ಯ ಹಾಗೂ ಸ್ತ್ರೀ ಜಾಗೃತಿಯ ವಸ್ತುವನ್ನು ಕಥೆಯ ಚೌಕಟ್ಟಿನಲ್ಲಿ ಚೆಂದವಾಗಿರಿಸಿದ್ದು ಇಲ್ಲಿಯ ಕಥೆಗಳ ವೈಶಿಷ್ಟ್ಯ. ಒಂದು ವೈಜ್ಞಾನಿಕ ಕತೆಯನ್ನು ಹೊರತುಪಡಿಸಿದರೆ ಬಹುತೇಕ ಕಥೆಗಳು ಸಾಮಾಜಿಕ ತಲ್ಲಣಗಳನ್ನುಒಳಗೊಂಡಿವೆ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೇಗಳು ಓದುಗರ ಗಮನ ಸೆಳೆಯುತ್ತವೆ.
ಹಿರಿಯ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಅವರು ಕೃತಿಗೆ ಬೆನ್ನುಡಿ ಬರೆದು ‘ಪ್ರಶ್ನೆಗಳನ್ನು ತಮ್ಮ ಮುಂದೆ ಹರಡಿ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ನಿರತರಾದುದು ಅವರ ‘ಬದುಕ ಭಿತ್ತಿಯ ಚಿತ್ರಗಳು’ ಸಂಕಲನದಲ್ಲಿ ದೃಗ್ಗೋಚರವಾಗುತ್ತದೆ. ಸ್ತ್ರೀಪರ ನಿಲುವುಗಳನ್ನು ಮುಖ್ಯವಾಗಿಟ್ಟುಕೊಂಡು ಕತೆಗಳನ್ನು ಹೆಣೆಯಲಾಗಿದೆ. ಇವರದು ಜನಪ್ರಿಯ ಶೈಲಿ. ಕಿರಿದರಲ್ಲಿ ಹಿರಿದನ್ನು ಹೇಳುವ ಕಲೆ ಇವರಿಗೆ ಸಿದ್ಧಿಸಿದೆ’ ಎಂದು ಪ್ರಶಂಸಿಸಿದ್ದಾರೆ.
ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು. 1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008, ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...
READ MORE