’ಆಯ್ಕೆ’ ಕಥಾಸಂಕಲನದಲ್ಲಿ ಹದಿನೆಂಟು ಕತೆಗಳಿವೆ. ಕನ್ನಡದ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮಯೂರ, ಸಂಯುಕ್ತ ಕರ್ನಾಟಕ, ವಿಜಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೂಡು ಕುಟುಂಬದ ಬದುಕಿನಲ್ಲಿ ವಿದ್ಯಾವಂತ ಮಹಿಳೆ ತಾನು ಎಲ್ಲದಕ್ಕೂ ಅರ್ಹಳಾಗಿದ್ದರೂ ಗಂಡನ ಅನಾದರಕ್ಕೆ ಒಳಗಾಗಿ, ಪಡುವ ಪಾಡಿನಿಂದ ದಿಟ್ಟತನ ಹಾಗೂ ಜಾಣತನದಿಂದ ಪಾರಾಗಿ ತಾನು ಬದುಕುವ ಮಾರ್ಗವೊಂದನ್ನು ಕಂಡುಕೊಂಡ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ಮುದುಕಿಯೊಬ್ಬಳಿಗೆ ಪೆನ್ಶನ್ ಕೊಡಿಸುವ ನೆಪದಲ್ಲಿ ಆಕೆಯನ್ನು ಅಧಿಕಾರಿಗಳು ನಡೆಸುಕೊಂಡ ರೀತಿಯನ್ನು ಇಲ್ಲಿ ವಿವರಿಸಾಗಿದೆ. ಮೂರು ಕತೆಗಳು ಸುಮಾರಾಗಿ ತೇಜಸ್ವಿ ಅವರ ತಬರನ ಕತೆ ಯ ಹಾಗೆ ಅಥವಾ ಪಿ. ಶೇಷಾದ್ರಿ ಅವರ ಬೇರು ಕತೆಯ ಹಾಗೆ ಸರಕಾರದ ಜೊತೆಗಿನ ವ್ಯವಹಾರ ಎಷ್ಟು ನಿಗೂಢ ಎಂಬುದನ್ನು ವಿವರಿಸುತ್ತದೆ.
ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ. ಅವರ ಹಲವು ಕಥೆ, ಕಾದಂಬರಿ, ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...
READ MORE