ಅವ್ವ

Author : ಲಕ್ಷ್ಮಣ ಕೊಡಸೆ

Pages 68

₹ 40.00




Year of Publication: 2007
Published by: ರಾಘವೇಂದ್ರ ಪ್ರಕಾಶನ
Address: ಅಂಬರಕೊಡ್ಲ, ಅಂಕೋಲ, ಉತ್ತರ ಕನ್ನಡ ಜಿಲ್ಲೆ

Synopsys

ದುಡಿಯುವ ವರ್ಗಕ್ಕೆ ಸೇರಿದ ಗಂಡು-ಹೆಣ್ಣುಗಳ ಮಧ್ಯದ ದೈಹಿಕ ಸೆಳೆತಗಳು 'ಕುಟುಂಬ' ವೆಂಬ ಸಾಮಾಜಿಕ ವ್ಯವಸ್ಥೆಗೆ ಮಣಿಯಲೇಬೇಕಾದ ಸೂಕ್ಷ್ಮ ಬಿಕ್ಕಟ್ಟುಗಳ ಸೊಗಸಾದ ಚಿತ್ರಣ, ವರ್ತಮಾನದ ಪ್ರಶ್ನೆಗಳಾಗಿಯೂ ಮುಂದುವರಿದಿರುವ ಬದುಕಿನ ಒಂದಷ್ಟು ಅರ್ಥಹೀನ ಸಿದ್ದನಂಬಿಕೆಗಳ ಬಗ್ಗೆ ಹಾಗೂ ಅವುಗಳಿಂದ ಬಿಡಿಸಿಕೊಳ್ಳಲು ಅಗತ್ಯವಿರುವ ಉತ್ತರಣಕ್ರಿಯೆ' ಗಳ ಬಗ್ಗೆ, ಅವ್ವ ಕಥಾ ಸಂಕಲನದ ಕಥೆಗಳು ಕಟ್ಟಿಕೊಟ್ಟಿವೆ. ಸಾಮಾಜಿಕ ವಿಷಯಾಧಾರಿತ ವಸ್ತುವಿಷಯಗಳನ್ನಿಟ್ಟುಕೊಂಡು ಕಥೆ ಬರೆದಿರುವ ಲೇಖಕರ ಬರವಣಿಗೆ ಶೈಲಿ ಸರಳ ಹಾಗೂ ಸುಲಲಿತವಾಗಿವೆ. ಕಥೆ ಬರೆಯುವುದರೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನು ಮನಸಲ್ಲಿಟ್ಟುಕೊಂಡಿರುವುದು ಈ ಕಥೆಗೆಳಲ್ಲಿ ಕಂಡು ಬರುತ್ತದೆ. 

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books