ಕನ್ನಡದ ಖ್ಯಾತ ಕತೆಗಾರರಾದ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ನಾಲ್ಕನೇ ಕಥಾ ಸಂಕಲನ ’ಅತ್ತರ್ ಹಾಜಿಕ ಮತ್ತು ಇತರ ಕಥೆಗಳು’. ಗೋರಿ ಕಟ್ಟಿಕೊಂಡವರು, ನೋಂಬು, ಮತ್ತು ದಜ್ಜಾಲ ಅವರ ಇತರೆ ಕಥಾಸಂಕಲನಗಳು. ಫಕೀರ್ ಮುಹಮ್ಮದ್ ಅವರು ಸರಕುಗಳು ಮತ್ತು ಕಚ್ಛಾದ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.
ಮುಸ್ಲಿಂ ಸಮುದಾಯದ ಸಂವೇದನೆಯನ್ನು ಕನ್ನಡಿಗರ ಅನುಭವದ ಭಾಗವನ್ನಾಗಿಸಿದ ಲೇಖಕರಲ್ಲಿ ಕಟ್ಪಾಡಿ ಪ್ರಮುಖರು. ದಜ್ಜಾಲ ಸಂಕಲನದಲ್ಲಿ ಮುಸ್ಲಿಂ ಐತಿಹ್ಯ – ಪುರಾಣಗಳನ್ನು ಬಳಸಿಕೊಂಡಿದ್ದಲ್ಲದೆ ಕೋಮುಸೌಹಾರ್ದಕ್ಕೆ ಪೂರಕವಾಗುವ ಕತೆಗಳನ್ನು ಬರೆದಿದ್ದಾರೆ. ಪ್ರಸ್ತುತ ಸಂಕಲನದಲ್ಲಿ ಅವರ ಕತೆಗಾರಿಕೆ ಒಂದು ಹೊಸ ಮಜಲನ್ನು ಪ್ರವೇಶಿಸಿದ್ದು, ಸೂಫಿ ಅನುಭಾವದ ಪ್ರಭಾವದಿಂದ ಕಟ್ಪಾಡಿಯವರು ತಮ್ಮ ಗಝಲ್ ಮತ್ತು ಪಾಡು ಕತೆಗಳಲ್ಲಿ ಫ್ಯಾಂಟಸಿಯ ಅಂಶಗಳನ್ನು ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ. ಆದರೂ ಅವರು ಶೋಷಿತರ ನೋವಿಗೆ ಮಿಡಿಯುವ ತಮ್ಮ ನೆಲೆಯನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದನ್ನು ಈ ಕಥೆಗಳಲ್ಲೂ ಖಾತ್ರಿಪಡಿಸಿದ್ದಾರೆ.
ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...
READ MORE