ಅತ್ಯುತ್ತಮ ಸಣ್ಣಕಥೆಗಳು

Author : ಕೆ. ನರಸಿಂಹಮೂರ್ತಿ

Pages 152

₹ 130.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಅತ್ಯುತ್ತಮ ಸಣ್ಣಕಥೆಗಳು’ ಕೃತಿಯು ಕೆ. ನರಸಿಂಹಮೂರ್ತಿ ಅವರ ಸಣ್ಣಕಥಾ ಸಂಕಲನವಾಗಿದೆ. ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಬಿಡುಗಡೆಗೊಂಡ ಈ ಕೃತಿಯು ಹನ್ನೆರಡು ಆಯ್ದ ಕತೆಗಳನ್ನು ಒಳಗೊಂಡಿದೆ. ಚರ್ಚೆಗೆ ಒಳಪಡದ ಬಹಳ ಮುಖ್ಯವಾದ ವಿಚಾರಗಳೇ ಈ ಕೃತಿಯ ಜೀವಾಳ. ಇಲ್ಲಿರುವ ಕತೆಗಳು ಸಾಂಸ್ಕೃತಿಕ ವಿಚಾರವಾಗಿ ಓದುಗರನ್ನು ಹಲವಾರು ವಿಚಾರಗಳಿಗೆ ಒಳಪಡಿಸುತ್ತದೆ. ಸಂಪಾದಕರು ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾಗಿದ್ದು, ಉತ್ತಮ ಆಡಳಿತಗಾರರೆಂದು ಹೆಸರು ಮಾಡಿದ್ದಾರೆ. 1953ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಮೂರು ಸಂಪುಟಗಳಲ್ಲಿ ಪ್ರಮುಖ ಸಣ್ಣ ಕತೆಗಳನ್ನು ಸಂಕಲನ ಮಾಡಿಕೊಟ್ಟಿದ್ದರು. ಅದರಲ್ಲಿ ಈ ಕೃತಿಯು ಒಂದಾಗಿದೆ.

About the Author

ಕೆ. ನರಸಿಂಹಮೂರ್ತಿ
(12 May 1919 - 12 June 1999)

ಕೆ. ನರಸಿಂಹಮೂರ್ತಿ (ಜನನ: 12-05-1919) ಕೋಲಾರ ಜಿಲ್ಲೆಯ ಗೌರಿಬಿದನೂರಿನ ಬಳಿಯ ಮಂಚೇನಹಳ್ಳಿಯವರು. ತಂದೆ ಕೃಷ್ಣಮೂರ್ತಿ, ತಾಯಿ ಸಾವಿತ್ರಮ್ಮ. ಪ್ರಾಥಮಿಕ ಶಿಕ್ಷಣ ಬೆಂಗಳೂರಿನಲ್ಲಿ. ಸಂಸ್ಕೃತ ಪಂಡಿತ ಸೀತಾರಾಮ ಶಾಸ್ತ್ರಿಗಳಿಂದ ಸಾಹಿತ್ಯಾಸಕ್ತಿ. ಕಾಲೇಜಿನಲ್ಲಿ ಓದುತ್ತಿದ್ದಾಗ ಬರೆದ ಕಥೆ ‘ಬೆಳೆದಲ್ಲೇ ಉಳಿದಿದ್ದರೆ’ ಕೃತಿಗೆ ಬಹುಮಾನ. ಸಾಹಿತ್ಯ ಪರಿಷತ್ತು ನಡೆಸಿದ ವಿಮರ್ಶಾ ಸ್ಪರ್ಧೆಯಲ್ಲಿ ‘ಕನ್ನಡದ ಸಣ್ಣ ಕಥಾ ಸ್ವರೂಪ’ ಲೇಖನಕ್ಕೆ ದ್ವಿತೀಯ ಬಹುಮಾನ ಲಭಿಸಿತ್ತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್‌) ಪದವಿ, ಅದೇ ಕಾಲೇಜಿನಲ್ಲಿ ಅಧ್ಯಾಪಕರಾದರು. 1943 ರಲ್ಲಿ ಇಂಗ್ಲಿಷ ಎಂ.ಎ. ಪದವೀಧರರು. 1956 ರಲ್ಲಿ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ, ಅಶೋಕ ವಿಜಯ (ಖಂಡಕಾವ್ಯ) ಪ್ರಿಯದರ್ಶಿನಿ ...

READ MORE

Related Books