ಖ್ಯಾತ ಕತೆಗಾರ ಎಂ ವ್ಯಾಸರ ’ಅಸ್ತ್ರ’ ಕೃತಿಯು ಕಥಾ ಸಂಕಲನವಾಗಿದೆ. ’ಅಸ್ತ್ರ’ ಕೃತಿಯು 14 ಪರಿವಿಡಿಗಳನ್ನು ಹೊಂದಿದ್ದು ಓ..ಮ್, ಬಾಣ, ಹಕ್ಕಿ, ಅಮ್ಮ, ಭ್ರಷ್ಟ, ಕುಜ, ಜಡ, ತೀರ, ಬಕ, ಅಸ್ತ್ರ, ಲಾವಾ, ಕೂಪ, ಕೊಲೆ, ನದಿ ಈ ಕೃತಿಯ ಕತಾವಸ್ತುವಾಗಳಾಗಿವೆ. ಎಂ. ವ್ಯಾಸರ ಕತೆಗಳು ಸಾಹಿತ್ಯ ವಲಯದಲ್ಲಿ ತನ್ನದೇ ಆದ ವಿಶೇಷ ಗುಣಗಳಿಂದ ವಿಶಿಷ್ಟ ಸ್ಥಾನವನ್ನು ಪಡೆದಿವೆ. ಸಾವಿನ ಬಗ್ಗೆ, ಸಾವಿನ ಭಯದ ಹಿಂದಿನ ಮನುಷ್ಯ ಮನಸ್ಸಿನ ಬಗ್ಗೆ ಗಾಢವಾಗಿ ಚಿಂತಿಸಿದ್ದ ವ್ಯಾಸರು, ’ ಸಾವು ಬದುಕಿನ ಕೊನೆಯಲ್ಲ, ಅದು ಕೇವಲ ಬದುಕಿನ ರೂಪಾಂತರ’ ಎನ್ನುತ್ತಿದ್ದರು. ಸಾವು ಮತ್ತು ಕಾಮವನ್ನು ಕೇಂದ್ರವಾಗಿಟ್ಟು ಅವರು ಯೋಚಿಸಿ ನೇಯ್ದ ಮನೋವಿನ್ಯಾಸಗಳು ಅವರ ಕತೆಗಳಲ್ಲಿ ಹಾಗೇ ಇವೆ. ಅವು ಎಲ್ಲ ಕಾಲದ ಮನುಷ್ಯನ ಆಲೋಚನೆಗಳಿಗೂ ಸಲ್ಲುವಂತವಾದ್ದರಿಂದ ಅವರ ಕತೆಗಳಿಗಾಗಲೀ ಚಿಂತನೆಗಳಿಗಾಗಲೀ ಸಾವಿನ ಭಯವಿಲ್ಲ ಎಂದು ಹೇಳಬಹುದು.
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ್ತು ’ಸ್ನಾನ’ ಎಂಬ ಮೂರು ಕಿರು ಕಾದಂಬರಿಗಳ ಸಂಕಲನವನ್ನೂ ಪ್ರಕಟಿಸಿದ್ದರು. 'ಅಜಂತಾ’ ಎಂಬ ಮಾಸಪತ್ರಿಕೆಯನ್ನು ಒಂದು ...
READ MORE