‘ಅದೃಷ್ಟದ ಹುಡುಗಿ’ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಕಥಾಸಂಕಲನವಾಗಿದೆ. ನಾವು ಬದುಕುತ್ತಿರುವ ಇಂದಿನ ಸನ್ನಿವೇಶ ಅನಿವಾರ್ಯತೆ ಅನುಗುಣವಾಗಿ ನಮ್ಮದಲ್ಲದ ಬಾಳನ್ನು ನಮಗೆ ತಿಳಿಯದೆಯೇ ಬದುಕುತ್ತಿದ್ದೇವೆ. ಕಥೆಗಳ ಮೂಲಕ ಇಲ್ಲಿ ಅನಾವರಣಗೊಂಡ ನೀರಸ ಬದುಕು ನಮಗೆಲ್ಲ ನೇರವಾಗಿ ಸಂಬಂಧಿಸಿದ್ದುದಾಗಿದೆ.
ಬಾಲಸುಬ್ರಹ್ಮಣ್ಯ ಕಂಜರ್ಪಣೆ- ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೆ.ಪಿ.ಬಾಲಸುಬ್ರಮಣ್ಯ ಅವರು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಂಜರ್ಪಣೆ ಯಲ್ಲಿ (20-05-1954) ಜನಿಸಿದರು. ಕೃಷಿ ಹಿನ್ನೆಲೆಯ ಅವರು ಉತ್ತಮ ಬರಹಗಾರರು. ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದು, ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಮಡಿಕೇರಿಯ ಸರಕಾರಿ ಹಿರಿಯ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಉಪನ್ಯಾಸಕರಾಗಿಯೂ ಅನುಭವವಿದೆ. ಪ್ರಸ್ತುತ ಕೊಡಗಿನ ಮಡಿಕೇರಿಯಲ್ಲಿ ನ್ಯಾಯವಾದಿಯಾಗಿದ್ದಾರೆ. ಸ್ವಯಂಪ್ರಭೆ, ಒಡೆದ ಪ್ರತಿಮೆಗಳು (ಕವನ ಸಂಕಲನಗಳು), ಅದೃಷ್ಟದ ಹುಡುಗಿ (ಕಥಾ ...
READ MOREಹೊಸತು- ಡಿಸೆಂಬರ್ -2003
ನಾವು ಬದುಕುತ್ತಿರುವ ಇಂದಿನ ಸನ್ನಿವೇಶ ಅನಿವಾರ್ಯತೆ ಗನುಗುಣವಾಗಿ ನಮ್ಮದಲ್ಲದ ಬಾಳನ್ನು ನಮಗೆ ತಿಳಿಯದೆಯೇ ಬದುಕುತ್ತಿದ್ದೇವೆ. ಕಥೆಗಳ ಮೂಲಕ ಇಲ್ಲಿ ಅನಾವರಣಗೊಂಡ ನೀರಸ ಬದುಕು ನಮಗೆಲ್ಲ ನೇರವಾಗಿ ಸಂಬಂಧಿಸಿದ್ದುದಾಗಿದೆ. ಪರಿಸ್ಥಿತಿಯ ಕೈಗೊಂಬೆಯಾಗಿ ಮನುಷ್ಯ ವರ್ತಿಸುತ್ತಿರುವ ಮತ್ತು ನಡೆದುಹೋಗುವ ಕೆಲ ಘಟನೆಗಳಿಗೆ ಇಲ್ಲಿನ ಕಥೆಗಳಲ್ಲಿ ಉತ್ತರ ಹುಡುಕುವ ಪ್ರಯತ್ನವಿದೆ. ಮುಖ್ಯವಾಗಿ ಅತಿ ನವ್ಯತೆಯ ಯಾವ ಸೋಗೂ ಇಲ್ಲದ ಸುಮಾರು ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ಕಥಾ ಪಾತ್ರಗಳು ಮಿಂಚಿವೆ.