‘ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ-4 ಸಣ್ಣಕಥೆ’ ಕೃತಿಯು ಜಿ.ಆರ್. ತಿಪ್ಪೇಸ್ವಾಮಿ ಅವರ ಸಣ್ಣಕಥಾಸಂಕಲನವಾಗಿದೆ. ಪ್ರತಿ ಕಾಲಘಟ್ಟದ ಕಥನ ಸ್ವರೂಪ, ಲಕ್ಷ್ಮಣ ಮತ್ತು ಧೋರಣೆಗಳನ್ನು ದಾಖಲೆ ನೀಡಿರುವ ‘ಸಣ್ಣಕತೆ’ ಇದಾಗಿದ್ದು, ಈ ಕೃತಿಯು 86 ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದೆ. ಇಲ್ಲಿ ಪರಿಸರದ ಕುರಿತ ಕತೆಗಳು, ಹಳ್ಳಿಯ ಜನಜೀವನದ ಕತೆಗಳನ್ನು ಕಾಣಬಹುದು.
ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಾಪಕರಾಗಿದ್ದ ಜಿ.ಆರ್. ತಿಪ್ಪೇಸ್ವಾಮಿ ಅವರು ಜಿ.ಆರ್.ಟಿ ಎಂದೇ ವಿದ್ಯಾರ್ಥಿಗಳಲ್ಲಿ ಪರಿಚಿತರಾಗಿದ್ದರು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗುಜ್ಜನಾಡು ಗ್ರಾಮದವರಾದ ಅವರು ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯು ನಿರ್ವಹಿಸಿದ್ದರು. 1994ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಆಗಿ ಸೇರಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ಪ್ರಸ್ತಾಪ, ಪ್ರಣೀತ,ಅಭಿಮುಖ (ವಿಮರ್ಶಾ ಕೃತಿಗಳು), ಬಂದೀರೆ ನನ್ನ ಜಡೆವೊಳಗೆ, ಕೋಲಾರಮ್ಮ, ದಾಸ ಸಾಹಿತ್ಯ ಮತ್ತು ಜಾನಪದ (ಜಾನಪದ ಕೃತಿಗಳು), ಕನ್ನಡ ನಾಡಿನ ಕಲಾವಿದರು, ಬಾಲಣ್ಣ-ಭಾಗವತರು, ಜೀವನ ಕಥೆ, ಪ್ರಶಸ್ತಿ ಪಡೆದ ಮಹನೀಯರು ...
READ MORE