'ಅಭಿನಯʼ ಕಥಾ ಸಂಕಲನವನ್ನು ಲೇಖಕಿ ಉಷಾ ನವರತ್ನರಾಂ ಅವರು ರಚಿಸಿದ್ದಾರೆ. ಜೀವನವೆಂಬುದು ನಾಟಕರಂಗ, ಇಲ್ಲಿ ಎಲ್ಲರೂ ಪಾತ್ರಧಾರಿಗಳು ಎಂದು ಕಥೆ ಅರಂಭಿಸುವ ಲೇಖಕಿ ಪ್ರತಿಯೊಬ್ಬರ ಬದುಕಿನ ಆಗು ಹೋಗುಗಳನ್ನು ಕಥಾ ಸಂಕಲನದ ರೂಪದಲ್ಲಿ ಇಲ್ಲಿ ಚಿತ್ರಿಸಿದ್ದಾರೆ. ಹೊರಗೆ ತೋರುವ ವ್ಯಕ್ತಿ ಒಂದು ಬಗೆಯಾದರೆ ಒಳಗಿರುವ ವ್ಯಕ್ತಿತ್ವ ಬೇರೆಯದೇ ಎಂಬುದನ್ನು ಮುನ್ನುಡಿಯಲ್ಲಿ ತಿಳಿಸುವ ಲೇಖಕಿ, ಅದನ್ನೇ ಕಥೆಯ ರೂಪದಲ್ಲಿ ಚಿತ್ರಿಸಿದ್ದಾರೆ. ಇಲ್ಲಿಯ ಸಣ್ಣ ಕಥೆಗಳು ಸರಳ ಭಾಷೆಯಲ್ಲಿದ್ದು ಓದುಗರನ್ನು ಸೆಳೆಯುತ್ತವೆ.
ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...
READ MORE