ರೇಷ್ಮಾ ಉಮೇಶ ಅವರ
ರೇಷ್ಮಾ ಉಮೇಶ ಅವರ ಆತ್ಮ ನಿವೇದನೆ ಕಥಾ ಸಂಕಲನವು ಓದುಗರ ಎದೆ ಕದವನ್ನು ತಟ್ಟುವಂತಿದೆ. ನಿವೇದನೆಯೊಳಗೆ ವೇದನೆಯೂ ಸೇರಿಕೊಂಡಿರುವುದರಿಂದ ಇದರೊಳಗಿನ ಕಥೆಗಳು ಪಾತ್ರಗಳ ವ್ಯಥೆಗಳನ್ನು ಅತ್ಯಂತ ಸಹಜವಾಗಿ ಚಿತ್ರಿಸುತ್ತದೆ. ಮದ್ಯಮ ಹಾಗೂ ಕೆಳಮದ್ಯಮ ಕುಟುಂಬಗಳಿಗೆ ಸೇರಿದ ಸ್ತ್ರೀ ಪುರುಷ ಪಾತ್ರಗಳನ್ನು ಆರಿಸಿಕೊಂಡು ಅವರ ನೋವು ಸಂಕಟಗಳನ್ನು ಹೃದ್ಯವಾಗಿ ಚಿತ್ರಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. - ಪ್ರೊ. ವಿ.ಬಿ.ಅರ್ತಿಕಜೆ ಪುತ್ತೂರು
ಲೇಖಕಿ ರೇಷ್ಮಾ ಉಮೇಶ ಅವರು ವೃತ್ತಿಯಲ್ಲಿ ಶಿಕ್ಷಕರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಭಾವಿಕೇರಿಯ ಮಾಣೇಶ್ವರ ನಾಯಕ ಹಾಗೂ ಶಾಂತಿ ನಾಯಕ ಅವರ ಪುತ್ರಿ. ಜಿಲ್ಲೆಯ ಕವಿ ಗಾಯಕ ಉಮೇಶ ಮುಂಡಳ್ಳಿ ಅವರ ಪತ್ನಿ. ಬೆಂಗಳೂರಿನ ವೈಮಾನಿಕ ತರಬೇತಿ ಸಂಸ್ಥೆ (ADA)ನಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದ ರೆಷ್ಮಾ ಅವರು ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯಕ್ಕೆ ಹಾಗೂ ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸದ್ಯ ಭಟ್ಕಳ ಚಿತ್ರಾಪುರದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಮಾಡುತ್ತಿದ್ದಾರೆ. ಹೊಂಗೆಯ ನೆರಳು ಇವರ ಮೊದಲ ಕವನ ...
READ MORE