`ಆಸರೆ’ ಪರಂಜ್ಯೋತಿ ಸ್ವಾಮಿ ಅವರ ಕಥಾಸಂಕಲನವಾಗಿದೆ. ಎಂಟು ಕಥೆಗಳ ವಸ್ತು ಒಂದಕ್ಕೊಂದು ಭಿನ್ನ ಸ್ವರೂಪದ್ದಾಗಿದೆ. ಸಮಾಜದ ಓರೆಕೋರೆಗಳನ್ನು ನಿಖರವಾಗಿ ಗುರುತಿಸುವತ್ತ ಸಾಕಷ್ಟು ಪ್ರಜ್ಞಾಪೂರ್ವಕ ಕೆಲಸವನ್ನು ಕಥಾಪಾತ್ರಗಳ ಮೂಲಕ ಲೇಖಕರು ಮಾಡಿದ್ದಾರೆ.
ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...
READ MOREಹೊಸತು-2004- ಜುಲೈ
ಈ ಸಂಕಲನದಲ್ಲಿರುವ ಎಂಟು ಕಥೆಗಳ ವಸ್ತು ಒಂದಕ್ಕೊಂದುಭಿನ್ನ ಸ್ವರೂಪದ್ದಾಗಿದೆ. ಸಮಾಜದ ಓರೆಕೋರೆಗಳನ್ನು ನಿಖರ ವಾಗಿ ಗುರುತಿಸುವತ್ತ ಸಾಕಷ್ಟು ಪ್ರಜ್ಞಾಪೂರ್ವಕ ಕೆಲಸವನ್ನು ಕಥಾಪಾತ್ರಗಳ ಮೂಲಕ ಲೇಖಕರು ಮಾಡಿದ್ದಾರೆ. ಸುತ್ತಲಿನ ವಿದ್ಯಮಾನಗಳತ್ತ ಕಣ್ಣು ಹಾಯಿಸಲು ಅವಕಾಶ ಮಾಡಿ ಕೊಡುವ ಅಥವಾ ಪ್ರಜ್ಞಾವಂತ ಪ್ರೌಢ ಓದುಗನಿಗೆ ಕೆಲವು ಘಟನೆಗಳ ಮುಸುಕು ಸರಿಸಿ ತೋರುವ ಪ್ರಯತ್ನ ಗಂಭೀರವಾಗಿ ಮಾಡಲಾಗಿದೆ. ಪಾತ್ರ ಚಿತ್ರಣದಲ್ಲಿ, ಕಥಾನಿರೂಪಣೆ ಯಲ್ಲಿ ಸಮಾಜದ ಕೆಳವರ್ಗದ ಜನರ ಬದುಕಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.