ಭಾಲಚಂದ್ರ ಜಯಶೆಟ್ಟಿ ಅವರ ಕಥಾಸಂಕಲನ ‘ಆನುದೇವ ಒಳಗಣವನು’.ಜಯಶೆಟ್ಟಿ ಅವರ ಮೊದಲನೆ ಕತೆಯಾದ 'ಗೋಂದಳ'ದಿಂದ ಹಿಡಿದು ಇತ್ತೀಚಿನ ಕತೆ 'ಒಳಗಿನವನು 'ವರೆಗಿನ ಎಲ್ಲ ಕತೆಗಳು ಇಲ್ಲಿ ಸಂಗ್ರಹವಾಗಿವೆ. ಅವರೇ ಹೇಳುವಂತೆ ಇಲ್ಲಿನ ಒಂದೊಂದು ಕತೆಗೂ ಒಂದೊಂದು ಒತ್ತಾಸೆ ಉಂಟಾದ್ದರಿಂದ ಮೂಡಿಬಂದಿವೆ. ನನ್ನ ಸುತ್ತಮುತ್ತಲ ಸಮಾಜದಲ್ಲಿ ನನಗೆ ಕಾಡಿದ ಅನಿಷ್ಟಗಳು, ಎಡಬಿಡಂಗಿ ವ್ಯವಸ್ಥೆ, ಮುಖಾವಾಡಗಳು ಇಲ್ಲಿಯ ಕತೆಗಳಿಗೆ ಪ್ರೇರಣೆಯಾಗಿವೆ ಎನ್ನುತ್ತಾರೆ. ಅದನ್ನು ಬಿಚ್ಚಿ ತೋರಿಸಲು ಬರುವುದಿಲ್ಲ, ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆ ಒಳತೋಟಿಯ ತುಡಿತವನ್ನೇ ನಾನು ಇಲ್ಲಿ "ಆನುದೇವಾ ಒಳಗಣನವನು' ಎಂದು ಗುರುತಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಆ ತುಡಿತಕ್ಕೆ ಬಾಯಿ ಇದ್ದರೂ ಅದು ಮೂಕ, ಸಂವೇದನೆ ಇದ್ದರೂ ಜಡ, ಬಿಚ್ಚಿ ಏನನ್ನೂ ನುಡಿಯದ, ಏನನ್ನೂ ಸಂವೇದಿಸದ ಮೂಕ ಪ್ರಜ್ಞೆ ಆ ಪ್ರಜ್ಞೆಯನ್ನು ತುಳಿದು ಸಮಾಜವೆಂಬ ರಂಗದ ಮೇಲೆ ಮುಖವಾಡಗಳನ್ನು ಧರಿಸಿಕೊಳ್ಳಬೇಕಾದ ಅಸಹಾಯಕ ಪರಿಸ್ಥಿತಿಗೆ ಸೋಲಬೇಕಾಗುತ್ತದೆ. ಅದು ಅನಿವಾರ್ಯವೂ ಹೌದು.
ಈ ಕತೆಗಳು ಮೂಡಿ ಬಂದ ಕಾಲಮಾನವು ಎರಡು ಮೂರು ದಶಕಗಳಿಗೆ ವ್ಯಾಪಿಸಿದ್ದರೂ ಇವುಗಳಲ್ಲಿ ಬಳಸಿಕೊಂಡ ವಸ್ತು, ಎತ್ತಿಕೊಂಡ ಸಮಸ್ಯೆಗಳಲ್ಲಿ ಇವೊತ್ತಿಗೂ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಉದಯೋನ್ಮುಖ ಕತೆಗಾರರಿಗೆ ಇವೇ ಸಮಸ್ಯೆಗಳು ಕಾಡಿದರೆ ಆಶ್ಚರ್ಯವಿಲ್ಲ. ಇಲ್ಲಿಯ ಕತೆಗಳ ಕುರಿತು ನಾನು ಹೆಚ್ಚಿಗೆ ಹೇಳುವುದು ಸಮಂಜಸವಲ್ಲ. ಹೇಳಬೇಕಾಗಿರುವುದನ್ನೆಲ್ಲ ಕತೆಗಳೇ ಹೇಳುತ್ತವೆ ಎನ್ನುತ್ತಾರೆ ಲೇಖಕ ಭಾಲಚಂದ್ರ ಜಯಶೆಟ್ಟಿ.
ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು. ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...
READ MORE