ಆಕಾಂಕ್ಷೆ

Author : ಬಿ.ಪಿ. ಶಿವಾನಂದರಾವ್‌

Pages 160

₹ 100.00




Year of Publication: 2008
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ. 420/28, 6-7ನೇ ಕ್ರಾಸ್‌ ನಡುವೆ, ಅಮರಜ್ಯೋತಿನಗರ, ಬೆಂಗಳೂರು - 560040

Synopsys

‘ಆಕಾಂಕ್ಷೆ’ ಲೇಖಕ ಬಿ. ಪಿ. ಶಿವಾನಂದರಾವ್ ಅವರ ಕಥಾ ಸಂಕಲನ. ಪ್ರತಿನಿತ್ಯ ನಡೆವ ಸಾಧಾರಣ ಸಂಗತಿಗಳೇ ಇಲ್ಲಿ ಕಥೆಗಳ ರೂಪ ಪಡೆದಿವೆ. ಮನುಷ್ಯರಿಗೆ ಬದುಕಲು ಬೇಕಾದ ಸಾಮಾಜವನ್ನು ಪರಿಚಯಿಸುತ್ತಾ ಮನುಷ್ಯ ಸಂಬಂಧಗಳ ಕುರಿತು ವಿಮರ್ಶಿಸುವ ಕತೆಗಳು ಇಲ್ಲಿವೆ. ಕಥೆಯ ಭಾಷೆಯು ಸರಳವಾಗಿದ್ದು, ಓದುಗರೊಂದಿಗೆ ಮಾತಿಗಿಳಿಯುವಷ್ಟು ಸಲೀಸಾಗಿ ಓದಿಸಿಕೊಳ್ಳುತ್ತವೆ.

About the Author

ಬಿ.ಪಿ. ಶಿವಾನಂದರಾವ್‌

ಬಿ.ಪಿ. ಶಿವಾನಂದರಾವ್ ಅವರು ಉತ್ತರ ಕನ್ನಡ ಜಿಲ್ಲೆಯ ಸಶಕ್ತ ಸಾಹಿತಿಗಳಾಗಿದ್ದು, ಅವರ ಕಥೆ, ಕಾದಂಬರಿ, ವೈಚಾರಿಕ ಲೇಖನಗಳ ಮೂಲಕ ಸಾಹಿತ್ಯಾಸಕ್ತನ್ನು ಚಿಂತನೆಗೆ ಹಚ್ಚಿದವರು. ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶಿವಾನಂದ ರಾವ್‌ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆದವರು. ಮುಖ್ಯವಾಗಿ ಅವರು ಕತೆಗಾರ, ಕಾದಂಬರಿಕಾರ. ನಗೆಲೇಖನ, ಶೈಕ್ಷಣಿಕ, ವೈಚಾರಿಕ ಪ್ರಬಂಧಗಳನ್ನೂ ಅವರು ಬರೆದಿದ್ದಾರೆ. ...

READ MORE

Reviews

ಪುಸ್ತಕ ಪರಿಚಯ: ಹೊಸತು-2009 ಏಪ್ರಿಲ್ 

ನಮ್ಮ ಮಧ್ಯೆ ದಿನವೂ ಎಂಬಂತೆ ಎಲ್ಲ ಕಡೆ ನಡೆಯುವ ನಿಜ ಸಂಗತಿಗಳೇ ಇಲ್ಲಿ ಕಥೆಗಳ ರೂಪದಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ನಮಗೆ ಬದುಕಲು ಬೇಕಾದ ಪರಿಸರದ ಪರಿಚಯ ಮಾಡಿಕೊಡುತ್ತ, ಮನುಷ್ಯ ಸಂಬಂಧಗಳನ್ನೇ ಜಾಲಾಡುತ್ತವೆ ಇವು. ಆಡುಮಾತಿನದೇ ಶೈಲಿಯಿಂದಾಗಿ ನಮ್ಮೊಂದಿಗೇ ಕುಳಿತು ನೇರವಾಗಿ ಮಾತನಾಡುವಂತೆ ಅನ್ನಿಸುವ ಕಥಾಪಾತ್ರಗಳು. ಇವು ಯಾವುದೇ ಕ್ರಾಂತಿಕಾರಿ ಬದಲಾವಣೆಯತ್ತ ಹೊರಳುವ ಆಸಕ್ತಿ ಯಿರದೆ ನಿಂತಲ್ಲೇ ಗಿರಕಿ ಹೊಡೆಯುತ್ತಿರುವುದು ನಿಜವಾದರೂ ಮನದಾಳದಲ್ಲೆಲ್ಲೋ ಸ್ವಸ್ಥ ಜೀವನದ ಬಗ್ಗೆ ಅತಿ ಎತ್ತರವಾದ ಆಕಾಂಕ್ಷೆ ಹೊಂದಿವೆ. ಕಥೆಗಾರ ಶ್ರೀ ಶಿವಾನಂದರಾವ್ ಇನ್ನಿತರ ಸಾಹಿತ್ಯ ಪ್ರಕಾರಗಳಲ್ಲೂ ಈಗಾಗಲೇ ಬರೆದಿದ್ದು ಕನ್ನಡಿಗರಿಗೆ ಸುಪರಿಚಿತರು.

Related Books