ಕನ್ನಡ ಸಾಹಿತ್ಯ ಲೋಕದಲ್ಲಿ ವಿಶೇಷ ಅವಶ್ಯಕತೆ ಇರುವ ಮಕ್ಕಳ ತೊಂದರೆ, ಅವರನ್ನು ಸಾಕಿ ಸಲಹುವ ವಿವರಗಳನ್ನು ಒಳಗೊಂಡಿರುವ ಈ ಕೃತಿ ವೈದ್ಯಕೀಯ ಸಮಸ್ಯೆಗಳ ಕುರಿತಾಗಿದೆ. ಸಂಕಲನದಲ್ಲಿ ಐದು ಕಥೆಗಳಿದ್ದು ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಪಾಲಕರ ಜವಾಬ್ದಾರಿಗಳೇನು, ಸಮಾಜದ ದೃಷ್ಟಿಕೋನವನ್ನು ಹೇಗೆಲ್ಲ ನಿಭಾಯಿಸಿ ಜೀವನ ನಡೆಸಬೇಕು ಎಂಬುದನ್ನು ತಿಳಿಸಿಕೊಡುವ ಅಪರೂಪದ ಕಥೆಗಳು ಇಲ್ಲಿ ಸಿಗುತ್ತವೆ.
ಚಂಪ ಜೈಪ್ರಕಾಶ್ ಅವರು ಶಿಕ್ಷಣ ತಜ್ಞೆ ಹಾಗೂ ವಿಶಿಷ್ಟವಾಗಿ ಮನೋವೈಕಲ್ಯವುಳ್ಳ ಮಕ್ಕಳ ಶಿಕ್ಷಣದಲ್ಲಿ ಪರಿಣಿತಿ ಪಡೆದಿದ್ದಾರೆ. ಮೂಲತಃ ಮೈಸೂರಿನವರಾದ ಅವರು 1957 ಡಿಸೆಂಬರ್ 28ರಲ್ಲಿ ಜನಿಸಿದರು. ‘೨೧ನೇ ಕ್ರೋಮೋಜೋಮ್ ಮತ್ತು ಇತರ ಕಥೆಗಳು’ ಅವರ ಮೊದಲ ಕೃತಿಗೆ 2015ರಲ್ಲಿ ಲೇಖಕರ ಮೊದಲ ಸ್ವತಂತ್ತ್ಯ ಕೃತಿಗೆ ಕೊಡಮಾಡುವ ಮಧುರಚೆನ್ನ ದತ್ತಿನಿಧಿ ಬಹುಮಾನ ಲಭಿಸಿದೆ. ...
READ MORE