‘108 ಯಹೂದಿ ಕಥೆಗಳು’ ರೋಹಿತ್ ಚಕ್ರತೀರ್ಥ ಅವರ ಕಥಾ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕಳೆದ ಎರಡು ಸಾವಿರ ವರ್ಷಗಳಲ್ಲಿ ಹುಟ್ಟಿದ ನೆಲದಿಂದ ದೇಶಭೃಷ್ಟರಾಗಿ, ತಮ್ಮದು ಎಂಬ ನೆಲ, ಭಾಷೆಗಳೆಲ್ಲವನ್ನೂ ಕಳೆದುಕೊಂಡು ನಿಜವಾದ ಅರ್ಥದಲ್ಲಿ ಅನಾಥರಾಗಿದ್ದ ಯಹೂದ್ಯರು ಎಂದೆಂದೂ ತಮ್ಮ ಜೀವನಪ್ರೀತಿ ಮತ್ತು ಜನಪದವನ್ನು ಬಿಟ್ಟುಕೊಡಲಿಲ್ಲ. ಯಹೂದ್ಯರ ಕುಲವನ್ನೇ ನಿರ್ನಾಮ ಮಾಡುತ್ತೇನೆಂದು ಹೊರಟ ಹಿಟ್ಲರನಿಗೂ ಅವರ ಜನಪದವನ್ನು ಬೇರುಸಹಿತ ಕೀಳಲು ಆಗಲಿಲ್ಲ. ಅಚ್ಚರಿಯೆಂದರೆ, ಸದಾ ದುಃಖದ ಕುಲುಮೆಯಲ್ಲಿ ಬೆಂದ ಯಹೂದಿ ಜನಾಂಗದ ಜನಪದ ಕತೆಗಳಲ್ಲಿ ಬರುವ ಪಾತ್ರಗಳು ಮಾತ್ರ ತಮ್ಮ ಕೇಳುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇಂತಹ ಜೀವನದೃಷ್ಟಿಯೂ ಇರುವುದು ಸಾಧ್ಯವಿದೆ ಎಂದು ನಮ್ಮ ಒಳಗಣ್ಣನ್ನು ತೆರೆಯುತ್ತವೆ. ವಿಶಿಷ್ಟವಾದ ಯಹೂದಿ ಹಾಸ್ಯಕತೆಗಳಲ್ಲಿ 108 ಕತೆಗಳನ್ನು ಆಯ್ದು “ನೂರೆಂಟು ಯಹೂದಿ ಕತೆಗಳು” ಕೃತಿಯನ್ನು ಕಟ್ಟಲಾಗಿದೆ.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE