‘ನಿವಾಳಿಸಿ ಬಿಟ್ಟ ಕೋಳಿ’ ಅನಿತಾ ಪಿ. ತಾಕೊಡೆ ಅವರ ಕತಾಸಂಕಲನವಾಗಿದೆ. ಈ ಸಂಕಲನದಲ್ಲಿ ಹೆಣ್ಣಿನ ಸಂತ್ರಸ್ತ ಮನೋಲೋಕವನ್ನು ಪುರುಷರ ಚಂಚಲ ಅಸ್ಥಿರ ಬುದ್ಧಿಗೆ ಮುಖಾಮುಖಿಯಾಗಿ ಚಿತ್ರಿಸುವ ಭಾವಲೋಕಗಳು ಅತ್ಯಂತ ಪರಿಣಾಮಕಾರಿಯಾಗಿ ಮೂಡಿವೆ. ಬಾಳನೌಕೆ ಕತೆಯಲ್ಲಿ ಲಂಪಟ ಗಂಡನೊಂದಿಗೆ ನರಕಸದೃಶ ಬದುಕನ್ನು ಸಾಗಿಸುವ ಅಮಾಯಕ ಹೆಣ್ಣಿನ ಅಸಹಾಯಕ ಸ್ಥಿತಿಯು ಹೃದಯಮಿಡಿಯುವ ಶೈಲಿಯಲ್ಲಿ ನಿರೂಪಿಸಲಾಗಿದೆ. ಭ್ರಮೆಯ ತೆರೆ ಸರಿದಾಗ ಈ ಕಥೆಯು ವಿಷಮ ದಾಂಪತ್ಯದ ಕಥೆಯನ್ನು ಹೇಳುತ್ತದೆ. ಇಲ್ಲಿ ಹೆಂಡತಿಯೆ ಖಳನಾಯಕಿ. ಪ್ರಮಿಳಾ ಎಂಬ ಹೆಣ್ಣು ನಜೀರ್ ಎಂಬ ಸುಂದರ ಶ್ರೀಮಂತ ಯುವಕನನ್ನು ಮದುವೆಯಾಗಿ ಅವನನ್ನು ಮನೆ ಕೂಲಿಯಾಳನ್ನಾಗಿ ನಡೆಸಿಕೊಂಡ ಭೀಕರ ಕತೆ ಇದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ...
READ MORE