ಕತೆಗಾರ್ತಿ ಶೋಭಾ ಗುನ್ನಾಪೂರ ಅವರ ಚೊಚ್ಚಲ ಕತಾಸಂಕಲನ ಭೂಮಿಯ ಋಣ. ಈ ಸಂಕಲನದಲ್ಲಿ ಒಟ್ಟು ಒಂಭತ್ತು ಕತೆಗಳಿವೆ. 'ಏಳು ಮಕ್ಕಳ ತಾಯಿ', 'ಎಕ್ಕಲಗಾ ಜೋಗಿ', 'ನಮ್ಮೂರ ಗೊಲ್ಲಾಳ' ಎಂಬ ಅನೇಕ ಶೀರ್ಷಿಕೆಗಳ ಕತೆಗಳಿವೆ. ಇಲ್ಲಿನ ಕತೆಗಳಲ್ಲಿ ಬಳಸಿದ ಭಾಷೆಯೂ ಕೂಡ ಅವರ ಕತೆಗಳ ಮತ್ತೊಂದು ಶಕ್ತಿಯಾಗಿ 'ಕಥನವನ್ನು' ನಿರ್ವಹಿಸುತ್ತದೆ. ಯಾವ ಪದಗಳನ್ನು ಅವರು ತಂದು ತುರುಕುವುದಿಲ್ಲ! ಪ್ರತೀ ಸಾಲುಗಳು,ಅದರೊಳಗಿನ ಪದಗಳು ಸಹ ಸಹಜವಾಗಿಯೇ ತೆನೆಯಲ್ಲಿ ಪಡೆಮೂಡಿದ ಜೋಳದ ಕಾಳಿನಂತಿವೆ. ಅಪರಿಮಿತ ಓದು, ಬದುಕಿನ ದಟ್ಟ ಅನುಭವ, ಮಾನವೀಯತೆಗೆ ಮಿಡಿಯುವ ಮಾತೃ ಹೃದಯ ಮುಂತಾದ ಇವುಗಳೇ ಕತೆಗಳನ್ನ ಕೈಹಿಡಿದು ಬರೆಸಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿರೇಮಸಳಿಯವರಾದ ಶೋಭಾ ಗುನ್ನಾಪೂರ ಅವರು ಓದಿದ್ದು ಒಂಭತ್ತನೇ ತರಗತಿ ತನಕ. ಕೃಷಿ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ಇತ್ತೀಚೆಗೆ. ಹಿರೇಮಸಳಿ ಗ್ರಾಮದಲ್ಲಿ ಸ್ತ್ರೀಶಕ್ತಿ ಸಂಘಗಳು ಅಭಿವೃದ್ಧಿ ಹೊಂದುವಲ್ಲಿ ಮಹತ್ತರದ ಪಾತ್ರ ವಹಿಸಿದ್ದಾರೆ. ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟವಾಗಿದೆ. ಅಲ್ಲದೆ, ಸೋಬಾನೆ ಪದ, ಜಾನಪದ ಮತ್ತು ತೊಟ್ಟಿಲು ಕಾರ್ಯಕ್ರಮದ ಹಾಡುಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಇವರು ಹೊಂದಿದ್ದಾರೆ. ಕೃತಿ: ಭೂಮಿಯ ಋಣ(ಚೊಚ್ಚಲ ಕಥಾ ಸಂಕಲನ -2022) ...
READ MOREhttps://avadhimag.in/%e0%b2%87%e0%b2%b8%e0%b3%8d%e0%b2%ae%e0%b2%be%e0%b2%af%e0%b2%bf%e0%b2%b2%e0%b3%8d-%e0%b2%a4%e0%b2%b3%e0%b2%95%e0%b2%b2%e0%b3%8d-%e0%b2%93%e0%b2%a6%e0%b2%bf%e0%b2%a6-%e0%b2%ad%e0%b3%82%e0%b2%ae/