ಮತ್ತೆ ನಾವು ಹಿಂದಿನಂತೆ

Author : ಬಿ. ಜನಾರ್ದನ ಭಟ್

Pages 400

₹ 360.00




Year of Publication: 2020
Published by: ಶ್ರೀರಾಮ ಪ್ರಕಾಶನ
Address: ಮಂಡ್ಯ.

Synopsys

ಕಾದಂಬರಿಕಾರ, ವಿಮರ್ಶಕ, ಸಾಹಿತ್ಯ ಚಿಂತಕ ಬಿ. ಜನಾರ್ದನ ಭಟ್ ಅವರು ಇದುವರೆಗೆ ಸುಮಾರು 50 ಕಥೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಆಯ್ದ 39 ಕಥೆಗಳನ್ನೊಳಗೊಂಡಿರುವ ಸಂಕಲನ `ಮತ್ತೆ ನಾವು ಹಿಂದಿನಂತೆ' ಒಂದು ಪ್ರಮುಖ ಕೃತಿ. ಈ ಕಥಾ ಸಂಕಲನವು ಒಂದು ರೀತಿಯಲ್ಲಿ ಅವರ ಸಣ್ಣಕಥೆಗಳ ಪಯಣದಲ್ಲಿ ಒಂದು ಮೈಲಿಗಲ್ಲು. ಏಕೆಂದರೆ, ಜನಾರ್ದನ ಭಟ್ ಅವರಿಗೆ ಅರವತ್ತು ವರ್ಷ ತುಂಬಿದ ಸಮಯದಲ್ಲಿ, “ಸಮಗ್ರ ಕಥಾ ಸಂಕಲನ”ದ ರೀತಿ ಪ್ರಕಟಗೊಂಡ ಕೃತಿ ಇದು. ಸಣ್ಣಕಥೆಗಳು ರೂಪುಗೊಳ್ಳುವುದು ಹೇಗೆ? ಒಬ್ಬ ಕಥೆಗಾರನ ಸೃಜನಶೀಲ ಪ್ರಕ್ರಿಯೆಯಲ್ಲಿ ಸಣ್ಣಕಥೆಯೊಂದು ಒಡಮೂಡಿ, ಸಂವಿಧಾನಕ್ಕೊಳಪಟ್ಟು, ತನ್ನಷ್ಟಕ್ಕೆ ತಾನೇ ಒಂದು ಅರ್ಥಪೂರ್ಣ ಕೃತಿಯಾಗಿ ಒಡಮೂಡುವುದು ಹೇಗೆ? ಇಂತಹ ಪ್ರಶ್ನೆಗಳಿಗೆ, ಸ್ವತಃ ವಿಮರ್ಶಕರೂ ಆಗಿರುವ ಜನಾರ್ಧನ ಭಟ್ ಅವರು ವಿವಿಧ ಸಂದರ್ಭಗಳಲ್ಲಿ ಅರ್ಥಪೂರ್ಣ ವ್ಯಾಖ್ಯಾನ ನೀಡಿದ್ದಾರೆ. ವಿಮರ್ಶಕರೇ ಕಥೆ ಬರೆದರೆ! ಈ ನಿಟ್ಟಿನಲ್ಲಿ ಈ ಕಥೆಗಳನ್ನು ಓದುವುದು ಅಧ್ಯಯನಪೂರ್ಣ ಎನಿಸುತ್ತದೆ. ಈ ಸಂಕಲನದ ಕಥೆಗಳನ್ನು ನಾಲ್ಕು ವಿಭಾಗಗಳಲ್ಲಿಗಳಲ್ಲಿ ಅಡಕಗೊಳಿಸಿದ್ದು, ಅವರ ಇತ್ತೀಚಿನ ಕಥೆಗಳು `ಸ್ವಲ್ಪ ಲಘುಧಾಟಿಯಿಂದ ಬದುಕನ್ನು' ಪರಿಶೀಲಿಸುತ್ತವೆ.

ಬಿ.ಜನಾರ್ದನ ಭಟ್ ಅವರ ಕಥೆಗಳ ಕುರಿತು ಜಯರಾಮ ಕಾರಂತರು ಹೇಳಿರುವ ವಿಷಯಗಳು ಇಲ್ಲಿ ಪ್ರಸ್ತುತ ಎನಿಸುತ್ತವೆ. “ `ಮೊದಲನೆಯ ಇಲಿ’ಯಂತಹ ಕಥೆಗಳು ಬಿ.ಜನಾರ್ದನ ಭಟ್ ಅವರ ವಿಡಂಬನಾ ಗುಣಕ್ಕೆ, ರೂಪಕ ಶಕ್ತಿಗೆ ಉದಾಹರಣೆಗಳು. ಗಂಭೀರವೆಂದು ಮೇಲ್ನೋಟಕ್ಕೆ ತೋರುವ ನಿರೂಪಣೆದ ಅವರು ಮನುಷ್ಯಲೋಕದ ಕುಹಕ ಚೇಷ್ಟೆ ಚಹರೆಗಳನ್ನು ಭಾವನಪೂರ್ಣವಾಗಿ ಅನಾವರಣಗೊಳಿಸುತ್ತ ಸಾಗುತ್ತಾರೆ. ಕಥೆಯಲ್ಲಿನ ಎಷ್ಟೋ ಪಾತ್ರಗಳ, ಸನ್ನಿವೇಶಗಳ ಹಿಂದಿನ ಪ್ರೇರಣೆ, ಪ್ರಚೋದನೆಗಳನ್ನು ಬಹುತೇಕ ಕೇಳುವವರಿಗೆ ಸಂತೋಷವಾಗುವಂತೆ ನಿರೂಪಿಸುತ್ತ ಹೋಗುವ ಅವರ ಈ ರೀತಿ, ನಮ್ಮ ಜಾನಪದ ಕಥನಕಾರರ, ನಿರೂಪಣೆಯ ಪರಿಷ್ಕೃತ ರೂಪ.” (ಬೆನ್ನುಡಿಯಲ್ಲಿ)

ಮೊದಲ ಕಥೆ "ದೂರು ದುರ್ಬಲ ಕುಮಾರ" ಟೈಟಲ್ಲೇ ಕಥೆಯಲ್ಲಿ ಹರಿದುಕೊಂಡಿರುವ ವ್ಯಂಗ್ಯವನ್ನು ಅಭಿವ್ಯಕ್ತಿಸುತ್ತದೆ. ವ್ಯವಸ್ಥೆಯ ಕುರಿತು ಅಸಮಾಧಾನ ಹೊಂದಿದ ಕಥಾನಾಯಕ ವ್ಯವಸ್ಥೆ ಅಂದರೇನೆಂದು ಅರಿಯದೆ ನಾಯಕನಾಗಿ ವ್ಯವಸ್ಥೆಯನ್ನು ಸುಧಾರಿಸುತ್ತೇನೆ ಎಂದು ಏನೇನೋ ಸಾಹಸ ಮಾಡಲು ಹೋಗಿ ಅಯಶಸ್ವಿಯಾಗುತ್ತಾನೆ. ಅವನು ಕಲಿತುಬಂದ ಶಿಕ್ಷಣ ವ್ಯವಸ್ಥೆಯ ವಿಡಂಬನೆಯೂ ಆಗಿ ಕಂಡು ಬರುತ್ತದೆ. 'ಕೊನೆಯ ಆಳುಪರಸ' ಮತ್ತು :ಚಪಡೇನ ಲಿಖಿತೇ' ಕಥೆಗಳಲ್ಲಿ ಐತಿಹಾಸಿಕ ಸಂಶೋಧನೆಯ ವಿಡಂಬನೆ ಇದೆ.’'ಮರವೆಗಳ ಕಥನಕಾರ' ಕತೆಯಲ್ಲಿ ಪ್ರಭುತ್ವದಲ್ಲಿರುವ ಪ್ರಭು ಎಂಬ ವ್ಯಕ್ತಿಯು ಕೆಲವರ ಆಸ್ತಿಯನ್ನು ವಂಚನೆ ಮಾಡಿ ತನ್ನ ಹೆಸರಿಗೆ ಮಾಡಿಕೊಂಡಿದ್ದು ಮತ್ತು ದೇವಸ್ಥಾನದ ಆಸ್ತಿಯನ್ನೂ ಒಳಗೆ ಹಾಕಿಕೊಂಡಿದ್ದು ಈ ಆರೋಪವು ಎಲ್ ಎನ್ ಉಪ್ ಎಂಬ ಇತಿಹಾಸ ಸಂಶೋಧಕನಿAದ ಸಾಬೀತಾಗುತ್ತದೆ. ಅವನು ಪೋಸ್ಟ್ ಡಾಕ್ಟರಲ್ ಪೇಪರ್ ಆಗಿ "ನಗರದಡಿಯ ಎರಡನೆಯ ಮತ್ತು ಮೂರನೆಯ ಪದರುಗಳಲ್ಲಿ ಹುದುಗಿರುವ ಇತಿಹಾಸದ ಸಾಂಸ್ಕೃತಿಕ ಮಹತ್ವ" ಪ್ರಬಂಧವನ್ನು ಮಂಡಿಸುವಾಗ ಪ್ರಭುಗಳ ಮೋಸ ಹೊರಬೀಳುತ್ತದೆ. ಅದರಲ್ಲಿ ಹೇಳಿರುವ ವಿಚಾರಗಳಿಂದ ಪ್ರಭುಗಳಿಗೆ ತೊಂದರೆಯಾಗಿರುವುದರಿAದ ಅವನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಾಗ ವಿಚಾರಣೆಯಾಗುತ್ತದೆ. ಆದರೆ ಉಪ್ ಎಲ್ಲಾ ದಾಖಲೆಗಳನ್ನು ಒದಗಿಸುತ್ತಾನೆ. ಪ್ರಭುಗಳು ಈ. ಸಂದಿಗ್ಧವನ್ನು ಒಬ್ಬ ರೌಡಿ ಗ್ಯಾಂಗಿನ ವ್ಯಕ್ತಿಯ ಮೇಲೆ ಕಾಲಿಗೆ ಗುಂಡು ತಾಗುವಂತೆ ಮಾಡಿ ಅದನ್ನು ಪೇಪರಿನಲ್ಲಿ ಕೊಟ್ಟು ಜನರ ಲಕ್ಷ್ಯವನ್ನು ಬೇರೆಡೆಗೆ ಹೊರಳುವಂತೆ ಮಾಡಿ ಬಚಾವಾಗುತ್ತಾರೆ. 'ದೇಜಪ್ಪಣ್ಣನ ಹಠಯೋಗ' ಒಂದು ವಿಶಿಷ್ಟ ಕಥೆ. ಇಲ್ಲಿನ ಹೆಚ್ಚಿನ ಕಥೆಗಳು ದಕ್ಷಿಣ ಕನ್ನಡ ವಿವಿಧ ಸಮಾಜಗಳ ಸಾಂಸ್ಕೃತಿಕ ಚಿತ್ರಣವಿದೆ. ಇಲ್ಲಿನ ಆಚರಣೆಗಳು, ಸಂಪ್ರದಾಯಗಳು, ಭೂತ ಕೋಲಗಳ ವಿವರಣೆ ಕಥೆಗೆ ಪೂರಕವಾಗುವಂತೆ ಜೋಡಿಸಲಾಗಿವೆ. ಕಥಾನೇಯ್ಗೆ ಉತ್ಕೃಷ್ಟ ಮಟ್ಟದ್ದಾಗಿದೆ. ಒಮ್ಮೆ ಓದಲು ಹಿಡಿದರೆ ಮುಗಿಸುವತನಕವೂ ಬಿಡಲಾಗದ. ಆಕರ್ಷಣೆ ಈ ಕಥೆಗಳಿಗಿದೆ. 'ಪುರುಷಮೃಗ' ಮತ್ತು 'ಕಳವಾದ ಕಥೆಯ ಬಗ್ಗೆ ಒಂದು ದೂರು' ಇವೆರಡೂ ಕಥೆಗಳ ಮೇಲಿನ ಕಥೆಗಳಾಗಿವೆ.'ಕಾಟಕಾಯಿ' ಬ್ರಿಟಿಷರು ಆಳುವ ಕಾಲದಲ್ಲಿ ಕಲ್ಯಾಣಪ್ಪನ ಕಾಟಕಾಯಿ ಎಂಬ ಹೆಸರಿನಲ್ಲಿ ನಡೆದ ದರೋಡೆ ಪ್ರಕರಣ ಹೇಗೆ ಆಳುವ ಅರಸರಿಗೆ ತಲೆನೋವಾಗಿದ್ದರು, ಕಲ್ಯಾಣಪ್ಪನ ಹೆಸರಿನಲ್ಲಿ ಬೇರೆ ಕೆಲವರು ಜನರನ್ನು ದರೋಡೆ ಲೂಟಿ ಮಾಡಿ ಭಯವನ್ನು ಹುಟ್ಟಿಸುತ್ತಿದ್ದರು ಎಂಬ ರೋಚಕ ಕಥೆ ಇದಾಗಿದೆ. 'ಪಂಜಣ್ಣ ಕುಕ್ಕಿನ ಚರಿತ್ರೆ' ಇಂದಿನ ಇಂಗ್ಲಿಷ್ ಮಾಧ್ಯಮದ ಮಕ್ಕಳು ಕನ್ನಡ ಮೀಡಿಯಮ್ ವಿದ್ಯಾರ್ಥಿಗಳೊಂದಿಗೆ ನಡೆದುಕೊಳ್ಳುವ ರೀತಿ, ಹಳ್ಳಿಯಲ್ಲಿ ನೆಟ್ವರ್ಕ್ ಇಲ್ಲದೆ ನಗರದ ಮಕ್ಕಳಿಗೆ ಹಳ್ಳಿ ಬೋರ್ ಆಗುವುದು, ಆಗ ನಗರದ ಮಕ್ಕಳು ತಾತ್ಸಾರದಿಂದ ನೋಡುವ ಮಕ್ಕಳಿಗೆ ಅಜ್ಜಿ ಪಂಜಣ್ಣ ಕುಕ್ಕಿನ ಕಥೆ ಹೇಳಿ ಮಕ್ಕಳು ಅದನ್ನು ಕೇಳಿ ಮೂಕವಿಸ್ಮಿತರಾಗುತ್ತಾರೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books