‘ಮಾಯಕದ ಸತ್ಯ’ ಕೃತಿಯೂ ಮಿತ್ರಾ ವೆಂಕಟ್ರಾಜ ಅವರ ಕತಾಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ತುಳಸಿ ವೇಣುಗೋಪಾಲ ಅವರು, `ರುಕುಮಾಯಿ' ಹಾಗೂ ‘ಹಕ್ಕಿ ಮತ್ತು ಅವಳು’ ಕಥಾಸಂಕಲನಗಳ ಮೂಲಕ ಓದುಗರ, ವಿಮರ್ಶಕರ ಮನಸ್ಸು ತಟ್ಟಿರುವ ಮಿತ್ರಾ ವೆಂಕಟೇಶ್ ಅವರ ಮೂರನೇ ಸಂಕಲನ ‘ಮಾಯಕದ ಸತ್ಯ’ ಕೃತಿ. ಕದನ, ದೈನಂದಿನ ಲವಲವಿಕೆಯೊಂದಿಗೆ ಬೆಳೆಯುವ ಪಾತ್ರಗಳ ಮೂಲಕವೇ ಮಾನವ ಸಂಬಂಧಗಳ ಸೂಕ್ಷ್ಮಗಳು, ದಿವ್ಯಗಳು, ಸಂಘರ್ಷಗಳು ಮೊದಲಾಗಿ ಆಗೋಚರವಾಗಿಯೇ ಉಳಿವ ಸತ್ಯಗಳು, ಛಕ್ಕೆಂದು ಹೊಳೆದು, ಓದಿನ ತಪ್ಪಸ್ಸನ್ನು ಕೃತಾರ್ಥಗೊಳಿಸುವ ಕತೆಗಳ ಸಾಲಿನಲ್ಲಿ ‘ಮಾಯಕದ ಸತ್ಯ’ ಕೃತಿಯೂ ಸಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಕಥೆಗಾರ್ತಿ ಮಿತ್ರಾವೆಂಕಟ್ರಾಜ್ ಅವರು 1948 ಜುಲೈ 11 ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ರುಕುಮಾಯಿ, ಹಕ್ಕಿ ಮತ್ತು ಅವಳು’ ಅವರ ಕಥಾಸಂಕಲನ, ಮೌಖಿಕ ಲೇಖನಗಳ ಸಂಕಲನ ಬೊಗಸೆಯಲ್ಲಿಟ್ಟು ಬೆಳಕು ತುಂಬಿ, ಮುಗಿಲು ಮಲ್ಲಿಗೆಯ ಎಟಕಿಸಿ ಮುಂತಾದ ಕೃತಿಗಳನ್ನು ರಚಿಸಿದ್ಧಾರೆ. ಕತೆಹೇಳೆ - ಮುಂಬೈ ಲೇಖಕಿಯರ ಕಥಾಸಂಕಲನ), ಬೆಳಕಿನೆಡೆಗೆ - ಮುಂಬೈ ಲೇಖಕಿಯರ ಲೇಖನಗಳ ಸಂಗ್ರಹ ಅವರ ಸಂಪಾದಿತ ಕೃತಿಗಳು. ಒಂದು ಬಸ್ಸಿಗೆ ಒಯ್ಯುವುದಿತ್ತು ಕಥೆಗೆ ದಿಲ್ಲಿಯ ಕಥಾಪ್ರಶಸ್ತಿ, ಹಕ್ಕಿ ಮತ್ತು ಅವಳು ಸಂಕಲನಕ್ಕೆ ರತ್ನಮ್ಮ ಹೆಗಡೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರಾಷ್ಟ್ರೀಯ ಮಹಿಳಾವರ್ಷದ ಪ್ರಶಸ್ತಿ, ...
READ MORE