ಪ್ರಜಾಪತಿ ಕಶ್ಯಪ ನಿರ್ಮಿತವಾದ ದೇಶವೇ ಕಶ್ಮೀರ, ಪ್ರವಾಸಿ ತಾಣವೆಂಬ ವರ್ಣನೆ ಈ ಕಾದಂಭರಿಯಲ್ಲಿ ಇಲ್ಲ.ಕಾಶ್ಮೀರಿ ಯುವಕರ ಮನಸ್ಥಿತಿ,ತಮ್ಮ ನೆಲದಲ್ಲಿ ನಿರಾಶ್ರಿತರಾದ ಮೂಲನಿವಾಸಿಗಳ ಕಥೆ ಇದು.ಧಾರ್ಮಿಕ ಮೂಲಭುತವಾದಕ್ಕೆ ಬಲಿಯಾದ ಸಮಾಜದ ಚಿತ್ರಣವನ್ನು ವಿವರಿಸುತ್ತದೆ. ಚೆಲುವಿನ ಕಾಶ್ಮೀರ ಹೇಗೆ ಉರಿಯುವ ಅಗ್ನಿಕುಂಡ ವಾಯಿತು, ಅಲ್ಲಿನ ದಿನ ನಿತ್ಯದ ಸಮಸ್ಯೆಗಳನ್ನು ಲೇಖಕಿ ಬಹಳ ಗಂಭೀರವಾಗಿ ಚರ್ಚಿಸಿ ಓದುಗರಿಗೆ ಮನಮುಟ್ಟುವ ಶೈಲಿಯಲ್ಲ ವಿವರಿಸಿದ್ದಾರೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು ಮೂಲತಃ ಮೈಸೂರಿನವರು. ಓದಿನ ಹವ್ಯಾಸದೊಂದಿಗೆ ಕಾದಂಬರಿ ರಚನೆಯಲ್ಲಿ ಮೇರು ಗೈ ಸಾಧಿಸಿದ್ದಾರೆ. ಅವರ ‘ಕಶೀರ’ ಕೃತಿ ಐದು ಮುದ್ರಣಗಳನ್ನು ಕಂಡು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ಮೊದಲ ಕಾದಂಬರಿ - ‘ಕ್ಷಮೆ’. ಮೂರನೇ ಕಾದಂಬರಿ ’ಅವಸಾನ’. ಅವರ ಸಾಹಿತ್ಯ ಸೇವೆಗೆ ‘ಚಡಗ’ ಪ್ರಶಸ್ತಿ ದೊರೆತಿದೆ. ...
READ MORE