‘ಗಾಂಪನ ಪುರಾಣ’ ಕೃತಿಯು ಭಾಸ್ಕರ್ ರೈ ಕಕ್ಕುವಳ್ಳಿ ಅವರ ತುಳು ಸಾಂಸ್ಕೃತಿಕ ಕೋಶವಾಗಿದ್ದು, ಮಾತುಕತೆಯ ವಿಚಾರಗಳನ್ನು ಒಳಗೊಂಡಿದ್ದೆ. ಇದರಲ್ಲಿ ಪದ್ಯವೂ ಇದೆ, ಕತೆಯೂ ಇದೆ, ನಾಟಕವೂ ಇದೆ. ಹೀಗೆ ಎಲ್ಲವನ್ನೂ ಒಳಗೊಂಡ ಈ ಕೃತಿಯು ಒಂದು ವಿಶಿಷ್ಟವಾದ ಕೃತಿಯಾಗಿ ಹೊರಹೊಮ್ಮಿದೆ. ಕೃತಿಯ ಕುರಿತು ಅಕ್ಷಯ್ ಶೆಟ್ಟಿ ಅವರು ಹೀಗೆ ಹೇಳಿದ್ದಾರೆ: ಗಾಂಪನ ಪುರಾಣ ಕೃತಿಯಲ್ಲಿ ಬರುವ ಗಾಂಪಣ್ಣ, ಸೀನಣ್ಣ ಮತ್ತು ಸೀತಕ್ಕ ಕುಳಿತು ಮಾತನಾಡುವುದು, ಮಂಗಳೂರಿನ ಕದ್ರಿ ಗುಡ್ಡೆಯಲ್ಲಿ. ಅದರದೇ ಆದ ಚಾರಿತ್ರಿಕತೆ ಇರುವಂತಹ, ಕದ್ರಿಗುಡ್ಡೆಯಲ್ಲಿ ಎರಡು ತಲೆಮಾರಿನ ಮೂವರು ಕುಳಿತು ತಿಳಿಸುವ ಮತ್ತು ತಿಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಪ್ರಾರಂಭದ ಹಿನ್ನೆಲೆಯಲ್ಲೂ ಇದೇ ನೆಲೆಯಿದ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತಿಳಿಸುತ್ತಾ ಸಂಸ್ಕೃತಿಯ ಚಲನಶೀಲತೆಯನ್ನು ಉಳಿಸಿಕೊಳ್ಳುವ ಕೆಲಸ ಇಲ್ಲಿ ನಡೆಯುತ್ತಿದೆ. ಹಾಗಾಗಿ, ಒಂದಷ್ಟು ವರ್ಷಗಳ ನಿಲ ರೇಡಿಯೋ ಕೇಳುಗರಿಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತಾ ಬಂದಿರುವ ಗಾಂಪಣ್ಣ ತಿರ್ಗಾಟ, ಈ ಕೃತಿಯ ಮೂಲಕ ದಾಖಲೆಯಾಗುತ್ತಿದೆ. ಮೂವತ್ತ ಮೂರು ಕಂತುಗಳಲ್ಲಿ ಸುಮಾರು ಎಪ್ಪತ್ತೆಂಬತ್ತು ಸಂಗತಿಗಳನ್ನು ಒಂದಷ್ಟು ವರ್ಷಗಳ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬ, ಆಚರಣೆಗಳನ್ನು ಚರ್ಚೆ ಮಾಡುವ ಗಾಂಜನ ಪುರಾಣ, ನನ್ನ ಪ್ರಕಾರ ಒಂದಷ್ಟು ವರ್ಷಗಳ ತುಳು ಸಂಸ್ಕೃತಿಯ ಎನ್ಸೈಕೊಪಿಡಿಯಾವು ನಮ್ಮ ತುಳುವ ನಾಡಿನಲ್ಲಿ ನಡೆದ ಹಲವಾರು ಸಂಭ್ರಮಗಳನ್ನು ತಿಳಿಸುವುದರ ಜೊತೆಗೆ, ಪಶ್ಚಿಮದಿಂದ ಪೂರ್ವಕ ಬಂದ ಅನೇಕ ಹೊಸ ಆಚರಣೆಗಳನ್ನೂ ಸಕಾರಾತ್ಮಕವಾಗಿಯೇ ನೋಡುತ್ತದೆ. ಹೆಚ್ಚಿನ ಎಲ್ಲ ಪರಂಪರೆಯ ಮತ್ತು ಹೊಸ ಆಚರಣೆಗಳನ್ನು ಸಕಾರಾತ್ಮಕವಾಗಿಯೇ ಗಾಂಪನ ಪುರಾಣ ನಿರ್ವಚಿಸಿದೆ.
ಭಾಸ್ಕರ್ ರೈ ಕುಕ್ಕುವಳ್ಳಿ ಅವರು ಮೂಲತಃ ದಕ್ಷಿಣ ಕನ್ನಡದವರು. ಯಕ್ಷಗಾನ, ಅರ್ಥಗಾರಿಕೆ, ವೇಷಗಾರಿಕೆ, ಬರವನಿಗೆ ಅವರ ಹವ್ಯಾಸ. ಸ್ಥಳೀಯ ಮತ್ತು ಬೆಂಗಳೂರಿನ ಟಿವಿ ವಾಹಿನಿಗಳಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕೃತಿಗಳು: ಗಾಂಪನ ಪುರಾಣ ...
READ MORE