ಕನ್ನಡದ ಸಾಂಸ್ಕೃತಿಕ ಕ್ಷೇತ್ರವನ್ನು ತನ್ನದೇ ರೀತಿಯಲ್ಲಿ ಸಮೃದ್ಧಗೊಳಿಸುತ್ತಿರುವ ಎ.ಎನ್. ಪ್ರಸನ್ನ ಅವರ ಐದನೇ ಕಥಾಸಂಕಲನವಿದು-ಪ್ರತಿಫಲನ. ‘ಒಟ್ಟು ಆರು ನೀಳ್ಗತೆಗಳನ್ನು ಕೃತಿ ಒಳಗೊಂಡಿದೆ. ಇವುಗಳಲ್ಲಿ ನಾಲ್ಕು ವಾಸ್ತವವಾದಿ ಕತೆಗಳು ಹಾಗೂ ಎರಡು ಭ್ರಾಮಕ ಅಥವಾ ಫ್ಯಾಂಟಸಿ ಕತೆಗಳು. ಎ.ಎನ್. ಪ್ರಸನ್ನ, ಕುಶಲ ಕತೆಗಾರರು ಹಾಗೂ ಅನವರತ ಪ್ರಯೋಗಶೀಲರು. ಈ ಸಂಕಲನದ ಪ್ರಯೋಗಗಳು ನನಗೆ ತುಂಬಾ ಸಂತೋಷವನ್ನು ಕೊಟ್ಟಿವೆ; ಹಾಗೆಯೇ ಇತರ ಓದುಗರಿಗೂ ಅದೇ ಬಗೆಯ ಸಂತೋಷ ಕೊಡುತ್ತವೆ ಎಂಬ ನಂಬಿಕೆ ನನಗಿದೆ...’ ಎಂದು ಹಿರಿಯ ವಿಮರ್ಶಕ ಸಿ.ಎನ್ ರಾಮಚಂದ್ರನ್ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...
READ MORE